ಮಂಗಳೂರು : ಕೋಡಿಕಲ್‌ನ ಸರಯೂ ಬಾಲ ಯಕ್ಷ ವೃಂದದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 24ನೇ ವರ್ಷದ ‘ಸರಯೂ ಸಪ್ತಾಹ – 2024’ ಸಾಧಕ ಸಮ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆ ಕಾರ್ಯಕ್ರಮಗಳನ್ನು ದಿನಾಂಕ 25-05-2024ರಿಂದ 31-05-2024ರವರೆಗೆ ಸಂಜೆ 5ರಿಂದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.
ದಿನಾಂಕ 25-05-2024ರಂದು ಸಂಜೆ 5 ಗಂಟೆಗೆ ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಸಪ್ತಾಹ ಉದ್ಘಾಟಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಶ್ರೀ ದೇವಿ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 26-05-2024ರಂದು ಬೆಳಗ್ಗೆ 9ರಿಂದ ‘ಮಹಿಳಾ ಯಕ್ಷ ಸಂಭ್ರಮ’ ನಡೆಯಲಿದೆ. ಕೋಡಿಕಲ್‌ನ ಸರಯೂ ಮಹಿಳಾ ವೃಂದದಿಂದ ‘ವೀರ ವೀರೇಶ’, ಜಪ್ಪು ಶ್ರೀ ರಾಮ ಕ್ಷತ್ರಿಯ ಮಹಿಳಾ ವೃಂದದಿಂದ ‘ಶ್ರೀಕೃಷ್ಣ ಲೀಲಾರ್ಣವ’, ಸುರತ್ಕಲ್‌ನ ಯಕ್ಷಕಲಾ ಮಹಿಳಾ ತಂಡದಿಂದ ‘ಸುಧನ್ವ ಮೋಕ್ಷ’, ಕದ್ರಿ ಯಕ್ಷ ಮಂಜುಳಾ ತಂಡದಿಂದ ‘ಅತಿಕಾಯ ಮೋಕ್ಷ’ ಪ್ರಸಂಗದ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ. ಸಪ್ತಾಹದ ಭಾಗವಾಗಿ ‘ಗುರುದಕ್ಷಿಣ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದಿನಾಂಕ 27-05-2024ರಂದು ಸಂಜೆ 5-00 ಗಂಟೆಗೆ ‘ವೀರ ಶತಕಂಠ’, ದಿನಾಂಕ 28-05-2024ರಂದು ‘ರತಿ ಕಲ್ಯಾಣ’, ದಿನಾಂಕ 29-05-2024ರಂದು ‘ರಾಜಾ ಸೌದಾಸ’, ದಿನಾಂಕ 30-05-2024ರಂದು ‘ತುಳುನಾಡ ಬಲಿಯೇಂದ್ರೆ’, ದಿನಾಂಕ 31-05-2024ರಂದು ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಬಯಲಾಟ ನಡೆಯಲಿದೆ.
ಪ್ರತೀ ದಿನ ಸಾಧಕರಿಗೆ ಸಮ್ಮಾನ ನೆರವೇರಲಿದ್ದು, ಮೊದಲ ದಿನ ಸಾಂಸ್ಥಿಕ ನೆಲೆಯಲ್ಲಿ ನಗರದ ವಿ.ಟಿ. ರಸ್ತೆಯ ಚೇತನಾ ಬಾಲ ವಿಕಾಸ ಕೇಂದ್ರ, ಉಳಿದ ದಿನಗಳಲ್ಲಿ ಪಟ್ಲಗುತ್ತು ಮಹಾಬಲ ಶೆಟ್ಟಿ, ಡಾ. ಪೂವಪ್ಪ ಶೆಟ್ಟಿ ಅಳಿಕೆ, ಅರುಣ್ ಕುಮಾರ್, ದೇವಿಪ್ರಕಾಶ್ ರಾವ್ ಕಟೀಲು, ಮಹಾಬಲೇಶ್ವರ ಭಟ್ ಭಾಗಮಂಡಲ, ಪ್ರಶಾಂತ್ ಕೋಳ್ಯೂರು, ಕೆರೆಮನೆ ನರಸಿಂಹ ಹೆಗ್ಡೆ, ಕಥಾ ಸಂಗ್ರಹಕಾರ ಮಧುಕರ ಭಾಗವತ್ ಇವರುಗಳಿಗೆ ಸಮ್ಮಾನ ನೆರವೇರಲಿರುವುದು.