ಧಾರವಾಡ : ವಂಶಿ ಪ್ರಕಾಶನ ಬೆಂಗಳೂರು ಮತ್ತು ಕೊಟಬಾಗಿ ಬಂಧುಗಳು ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಪುಸ್ತಕ ಬಿಡುಗಡೆ ಸಮಾರಂಭ’ವನ್ನು ದಿನಾಂಕ 08 ಡಿಸೆಂಬರ್ 2024ರಂದು ಸಂಜೆ 5-00 ಗಂಟೆಗೆ ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತು ಆರ್.ಎನ್. ಶೆಟ್ಟಿ ಕ್ರೀಡಾಂಗಣ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಸಮಾರಂಭದಲ್ಲಿ ಲೇಖಕ ಅನಂತ ಕೊಟಬಾಗಿ ಇವರ ‘ಸತ್ಯಂ ಶಿವಂ ಸೌಂದರ್ಯಂ’ ಎಂಬ ಕೃತಿ ಲೋಕಾರ್ಪಣೆಗೊಳ್ಳಲಿದ್ದು, ಶ್ರೀ ಶ್ರೀನಿವಾಸ ವಾಡಪ್ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಕೃಷ್ಣ ಕಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀಮತಿ ಮಾಲತೀ ಮುದಕವಿ ಮತ್ತು ಶ್ರೀ ಎಂ.ಎಸ್. ಕೃಷ್ಣಮೂರ್ತಿ ಇವರುಗಳು ಪುಸ್ತಕ ಪರಿಚಯ ಮಾಡಲಿರುವರು.