ಕೋಟ : ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ನೆನಪು ಮತ್ತು ಉಸಿರು ಕೋಟ ಸಹಯೋಗದೊಂದಿಗೆ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ದಿನಾಂಕ 15 ಫೆಬ್ರವರಿ 2026ರಂದು ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ 4ನೇ ಮಹಿಳಾ ಕಾಲಮಿತಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸವಿತಾ ಮಾಧವ ಶಾಸ್ತ್ರಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಆನಂದ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ತಿಳಿಸಿದ್ದಾರೆ.
ಮೂರು ಕಥಾ ಸಂಕಲನ, ಕಥೆಗಳು ಹಾಸ್ಯ ಬರಹಗಳು ನಾಡಿನ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಹಲವಾರು ರಾಜ್ಯ ಮಟ್ಟದ ಸಾಹಿತ್ಯಿಕ ಸ್ಪರ್ಧೆಯಲ್ಲಿ ಪುರಸ್ಕಾರಗಳಿಸಿದ್ದಾರೆ. ಅವರ ಕಥೆ ತೆಲುಗಿಗೆ ಅನುವಾದಗೊಂಡಿದ್ದು, ಅವರ ಕಥೆಯನ್ನು ಕೆನಡಾ ದೇಶದ ತಂಡ ಕಿರುಚಿತ್ರ ನಿರ್ಮಿಸುತ್ತಿದ್ದಾರೆ.
