ಬೆಂಗಳೂರು : ಯಕ್ಷದೇಗುಲ ಇದರ ವತಿಯಿಂದ ಯಕ್ಷ ಪಯಣದ ಎರಡನೇ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ಬೆಂಗಳೂರಿನ ತ್ಯಾಗರಾಜ ನಗರದ ಯಕ್ಷದೇಗುಲದ ಸಭಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿಗಳಿಂದ ಕೋಡಂಗಿ ನೃತ್ಯ, ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಕಂಸವಧೆಯ ಒಂದು ಸನ್ನಿವೇಶವನ್ನು ಪ್ರದರ್ಶಿಸಲಾಯಿತು. ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಫಾನ್ಸ್ ನ ಫ್ರೆಂಚ್ ಬರಹಗಾರ ಮತ್ತು ಸಾಂಸ್ಕೃತಿಕ ಪ್ರತಿಕೋದ್ಯಮರಾದ ಫಿಲಿಪ್ ಪಾಟೆಕ್‌ರವರು ಭಾಗವಹಿಸಿದರು. ಹಾಗೇ ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಕೆ. ಮೋಹನ್, ಯಕ್ಷಗಾನ ಗುರುಗಳಾದ ಕೋಟ ಸುದರ್ಶನ ಉರಾಳ ಮತ್ತು ಪಿಯಾಂಕ ಕೆ. ಮೋಹನ್‌ರವರು ಭಾಗವಹಿಸಿದರು.