ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ನವಗ್ರಹ ಗುಡಿಯಲ್ಲಿ ‘ಸೀತಾಪಹಾರ’ ಎಂಬ ತಾಳಮದ್ದಳೆಯು ದಿನಾಂಕ 06-11-2023ರಂದು ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ಆನಂದ ಸವಣೂರು ಹಾಗೂ ಚೆಂಡೆ, ಮದ್ದಳೆಗಳಲ್ಲಿ ಪ್ರೊ. ದಂಬೆ ಈಶ್ವರ ಶಾಸ್ತ್ರಿ, ಮುರಳೀಧರ ಕಲ್ಲೂರಾಯ, ಅಚ್ಚುತ ಪಾಂಗಣ್ಣಾಯ ಮತ್ತು ಮಾ. ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ ಮತ್ತು ಶುಭಾ ಗಣೇಶ್ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಮನೋರಮಾ ಜಿ. ಭಟ್ (ಸೀತೆ), ಭಾರತಿ ನೆಲ್ಲಿತ್ತಾಯ (ಲಕ್ಷ್ಮಣ), ಶಾರದಾ ಅರಸ್ (ಜಟಾಯು), ಹರಿಣಾಕ್ಷಿ ಜೆ. ಶೆಟ್ಟಿ (ರಾವಣ) ಮತ್ತು ಭಾರತಿ ರೈ (ಸನ್ಯಾಸಿ ರಾವಣ) ಪಾತ್ರಗಳಲ್ಲಿ ಭಾಗವಹಿಸಿದರು. ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ರಂಗನಾಥ ರಾವ್ ಸಹಕರಿಸಿದರು.
