24 ಫೆಬ್ರವರಿ 2023, ಬೆಂಗಳೂರು: ಬೀಚಿ ಅವರ ರಚನೆ, ಶೈಲೇಶ್ ಕುಮಾರ್ ಅವರ ನಿರ್ದೇಶನದಲ್ಲಿ ನಗುವಿನ ಭೋಜನ ಉಣಿಸಲು ಸೈಡ್ ವಿಂಗ್ ತಂಡದವರು ‘ಸೀತೂ ಮದುವೆ’ ನಾಟಕದೊಂದಿಗೆ ಬರುತ್ತಿದ್ದಾರೆ. ನಾಳೆ, ಫೆಬ್ರವರಿ 25ಕ್ಕೆ ಕೆ.ಎಚ್. ಕಲಾಸೌಧ, ಹನುಮಂತನಗರ ಬೆಂಗಳೂರಿನಲ್ಲಿ ಸಂಜೆ 7:30ಕ್ಕೆ.
ಟಿಕೇಟಿಗಾಗಿ ಸಂಪರ್ಕಿಸಿ: ಶ್ರೀಮತಿ ಮಾಲಾ: 9980179019, ಶ್ರೀ ಶೈಲೇಶ್: 9845087901
ಸೀತು ಮದುವೆ ಬಗ್ಗೆ: ಮದುವೆಯನ್ನೂದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತಾರೆ. ಅದಕ್ಕೆ ಎನೋ ಕೆಲವರಿಗೆ ಸ್ವರ್ಗ ಸೇರೋವರಿಗೂ ಮದ್ವೆನೇ ಆಗೋದಿಲ್ಲ. ಆ ಕಾಲ, ಅರವತ್ತರ ಆಸುಪಾಸಿನಲ್ಲಿ ಇಪ್ಪತ್ತರ ಹರೆಯದ ಹೆಣ್ಣಿಗೆ ಮದುವೆಯಾಗಿಲ್ಲ ಅಂದ್ರೆ! ಛೆ ಛೆ.. ಎಂಥಾ ಅಪರಾಧ.. ದೊಡ್ಡ ಕನಸುಗಳನ್ನು ಹೊತ್ತು ಮದುವೆಯೆಂದರೆ ಮೂತಿ ಮುರಿಯೋ ಮದುವೆ ಹುಡುಗಿ ಒಂದೆಡೆ.. ಆಕೆಗೆ ಮದುವೆ ಮಾಡುವುದನ್ನೇ ದೊಡ್ಡ ಕನಸಾಗಿಸಿಕೊಂಡ ಮನೆಯವರು ಒಂದೆಡೆ..ಈ ಎರಡೆಡೆಯಲ್ಲಿರುವವರು ಒಂದೆಡೆಗೆ ಸೇರುತ್ತಾರೋ? ಬೀಚಿಯವರ ಕಚಗುಳಿಯಿಡುವ ಸಾಲುಗಳೊಂದಿಗೆ ಅರವತ್ತರ ಆಸುಪಾಸಿನ ರಸವತ್ತಾದ ಕಥನ ! “ಸೀತೂ ಮದುವೆ !?”
ರಚನೆ – ನಿರ್ಮಾಣ – ನಿರ್ದೇಶನ : ಶೈಲೇಶ್ ಕುಮಾರ್ ಎಂ.ಎಂ.
ಉದ್ಯಮಿಯಾಗಿದ್ದು ರಂಗಭೂಮಿಯಲ್ಲಿನ ಆಸಕ್ತಿಯಿಂದಾಗಿ ರಂಗಭೂಮಿಯಲ್ಲಿ ಡಿಪ್ಲೋಮ ಪದವಿ ಪಡೆದು, ಸತತವಾಗಿ ನಾಟಕಗಳನ್ನು ಮಾಡುವ ನಿಟ್ಟಿನಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ” ಸೈಡ್ ವಿಂಗ್ ” ತಂಡವನ್ನು ಆರಂಭಿಸಿದರು. ಮಕ್ಕಳಿಗಾಗಿ ಅನೇಕ ನಾಟಕ ಬರೆದಿರುವ ಇವರು ಹಿರಿಯರಿಗಾಗಿ “ಸಡನ್ನಾಗ್ ಸತ್ತೋದ್ರೆ… ! ? “, “ಕನ್ನಡಿಯೋಳಗಿನ್ಕರ್ದಂಟು ” ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿದ್ದು ಇವರು ರಚಿಸಿ ನಿರ್ದೇಶಿಸಿರುವ ” ಇಲ್ಲ… ಅಂದ್ರೆ… ಇದೆ ? ” ನಾಟಕವು 80ಕ್ಕೂ ಹೆಚ್ಚು ಪ್ರದರ್ಶನಗಳನ್ನು ರಾಜ್ಯಾದ್ಯಂತ – ರಾಷ್ಟ್ರದ್ಯಂತ ಸಮಾರಂಭಗಳಲ್ಲಿ, ರಾಷ್ಟ್ರೀಯ ನಾಟಕೋತ್ಸವದಲ್ಲಿ ಕಂಡು ಮನ್ನಣೆಗಳಿಸಿದೆ.
ತಂಡ : ಸೈಡ್ ವಿಂಗ್ ಬೆಂಗಳೂರು
ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭವಾದ ತಂಡ “ಸೈಡ್ ವಿಂಗ್ “. ಆರಂಭವಾದ ನಾಲ್ಕೇ ವರ್ಷದಲ್ಲಿ 12ಕ್ಕೂ ಹೆಚ್ಚಿನ ನಾಟಕಗಳ 150ಕ್ಕೂ ಹೆಚ್ಚು ಪ್ರದರ್ಶನಗಳನ್ನು,6ಕ್ಕೂ ಹೆಚ್ಚು ಬೀದಿ ನಾಟಕಗಳ 50ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. “ಇಲ್ಯಾಡ್ಗಣ್ಣ” “ಕನ್ನಡಿಯೊಳಗಿನ್ಕರ್ದಂಟು”, “ಸಡನ್ನಾಗ್ ಸತ್ತೋದ್ರೆ..!?”, “ಇಲ್ಲ… ಅಂದ್ರೆ… ಇದೆ!” “ಸ್ವರ್ಗ “.”ಈ ಪ್ರೇಮಲೋಕದಾ ಗೀತೆಯೂ ” ನಾಟಕಗಳೊಡನೆ ಡಾ ll ಗಿರೀಶ್ ಕರ್ನಾಡ್ ಅವರ ರಚನೆಯ ಕಡೆಯ ನಾಟಕ “ರಾಕ್ಷಸ – ತಂಗಡಿ ” ಶ್ರೀ ಕುವೆಂಪು ವಿರಚಿತ ” ಶ್ರೀ ರಾಮಾಯಣ ದರ್ಶನಮ್ ” ನ ಆಯ್ದ ಭಾಗ ” ದಶಾನನ ಸ್ವಪ್ನ ಸಿದ್ಧಿ “ನಾಟಕಗಳನ್ನು ರಂಗದ ಮೇಲೆ ತಂದಿದೆ. ಡಾ ll ಚಂದ್ರಶೇಖರ ಕಂಬಾರ ಅವರ ರಚನೆಯ “ನಾಯೀಕತೆ ” ನಾಟಕವು ರಾಜ್ಯಮಟ್ಟದ ನಟಕೋತ್ಸವದಲ್ಲಿ “ಉತ್ತಮ ನಾಟಕ “ಸೇರಿ ಎಂಟು ಪ್ರಶಸ್ತಿಗಳನ್ನು ಪಡೆದಿದೆ. ಹಾಗೂ ಪ್ರತಿಷ್ಠಿತ “ರಂಗಭೂಮಿ ಉಡುಪಿ” ಸಂಸ್ಥೆ ಆಯೋಜಿಸುವ ನಾಟಕ ಸ್ಪರ್ಧೆಯಲ್ಲಿ ಮೂರು ಪ್ರಶಸ್ತಿಗಳನ್ನು ಪಡೆದಿದೆ. ಇನ್ನು ಹೆಚ್ಚಿನ ನಾಟಕಗಳ ಪ್ರಯೋಗಗಳ ಯೋಜನೆಯೊಂದಿಗೆ ತಂಡ ಮುನ್ನುಗ್ಗುತ್ತಿದೆ.