ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದ ಸಹಯೋಗದಲ್ಲಿ ಹಿರಿಯಡಕದ ಶ್ರೀಮತಿ ಯಶೋಧಾ ಜೆನ್ನಿ ಸ್ಮೃತಿ ಸಂಚಯ ಪ್ರಾಯೋಜಿತ ‘ಸಣ್ಣ ಕಥಾಸಂಕಲನ ಸ್ಪರ್ಧೆ-2024’ರ ಕೃತಿಯ ಬಹುಮಾನಕ್ಕೆ ಗೀತಾ ಕುಂದಾಪುರ ಅವರ ‘ಪಾಂಚಾಲಿಯಾಗಲಾರೆ’ ಕಥಾಸಂಕಲನ ಆಯ್ಕೆಯಾಗಿದೆ. ಅಲ್ಲದೆ ಇಬ್ಬರು ಉದಯೋನ್ಮುಖ ಕಥೆಗಾರ್ತಿಯರಾದ ಶೋಭಾ ದಿನೇಶ್ ಉಡುಪಿ, ದೀಪ್ತಿ ಬಿ. ಮಂಗಳೂರು ಇವರು ಪ್ರೋತ್ಸಾಹಕ ಬಹುಮಾನ ಪಡೆಯಲಿದ್ದಾರೆ.
ಸಂದೀಪ ಸಾಹಿತ್ಯ ಪ್ರಕಾಶನದಿಂದ ಪ್ರಾಯೋಜಿತ ಏಕಾಂಕ ನಾಟಕ ಹಸ್ತಾಕ್ಷರ ಪ್ರತಿ ಸ್ಪರ್ಧೆಗೆ ಈ ಬಾರಿ ಅಕ್ಷತಾ ರಾಜ್ ಪೆರ್ಲ ಇವರ ‘ರಾಜೀ ಪ್ರಸಂಗ’ ಸಾಮಾಜಿಕ ನಾಟಕ ಆಯ್ಕೆಯಾಗಿದೆ. ವಾರ್ಷಿಕ ಪ್ರಶಸ್ತಿ, ಬಹುಮಾನ ವಿತರಣಾ ಕಾರ್ಯಕ್ರಮ ದಿನಾಂಕ 26 ಏಪ್ರಿಲ್ 2025ರಂದು ಕರಾವಳಿ ಲೇಖಕಿಯರ ವಾಚಕಿಯರ ಸಂಘದ ‘ಸಾಹಿತ್ಯ ಸದನ’ದ ಸಭಾಭವನದಲ್ಲಿ ನಡೆಯಲಿದೆ.