ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಪ್ರದಾನ ಮಾಡುತ್ತಿರುವ ಆರನೇ ವರ್ಷದ ‘ಮಲಬಾರ್ ವಿಶ್ವರಂಗ ಪುರಸ್ಕಾರ 2025’ಕ್ಕೆ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ.
ರಂಗ ನಟ, ಸಂಘಟಕ ಹಾಗೂ ನಿರ್ದೇಶಕ ಅರವಿಂದ ಕುಲಕರ್ಣಿ ಧಾರವಾಡ, ರಂಗ ಸಂಘಟಕ ಹಾಗೂ ನಿರ್ದೇಶಕ ಗಣೇಶ್ ಕಾರಂತ್ ಬೈಂದೂರು, ರಂಗನಟಿ ಹಾಗೂ ಕಂಠದಾನ ಕಲಾವಿದೆ ಪ್ರಿಯಾಸರೋಜಾದೇವಿ ಮುಂಬೈ, ರಂಗನಟ ಹಾಗೂ ಸಂಘಟಕ ಪ್ರಕಾಶ್ ಜಿ. ಕೊಡವೂರು, ರಂಗನಟಿ ಮಂಜುಳಾ ಜನಾರ್ದನ್ ಮಂಗಳೂರು ಇವರುಗಳಿಗೆ ದಿನಾಂಕ 26 ಮಾರ್ಚ್ 2025ರಂದು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯುವ ವಿಶ್ವರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ, ನಗದು ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವರಂಗ ಪುರಸ್ಕಾರ-2025 ‘ ಪ್ರದಾನ ಮಾಡಲಾಗುವುದು ಎಂದು ಮಲಬಾರ್ ವಿಶ್ವರಂಗ ಪುರಸ್ಕಾರ ಸಮಿತಿಯ ಸಂಚಾಲಕರಾದ ರಾಜೇಶ್ ಭಟ್ ಪಣಿಯಾಡಿ ತಿಳಿಸಿರುತ್ತಾರೆ.
ಅರವಿಂದ ಕುಲಕರ್ಣಿ ಧಾರವಾಡ
ಗಣೇಶ್ ಕಾರಂತ್ ಬೈಂದೂರು
ಪ್ರಿಯಾಸರೋಜಾದೇವಿ ಮುಂಬೈ
ಪ್ರಕಾಶ್ ಜಿ. ಕೊಡವೂರು ಮಂಜುಳಾ ಜನಾರ್ದನ್ ಮಂಗಳೂರು