ಮಡಿಕೇರಿ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ಮಡಿಕೇರಿ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಅರಮನ ಪಾಲೆರ ಕೆ.ಮಂದಣ್ಣ ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನಿರ್ದೇಶನದಂತೆ ಮಡಿಕೇರಿ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ದಿನೇಶ್ ಪೆಗ್ಗೋಲಿ, ಪ್ರಧಾನ ಕಾರ್ಯದರ್ಶಿಯಾಗಿ ಹರ್ಷಿತಾ ಶೆಟ್ಟಿ ಮನವಳಿಕೆ ಗುತ್ತು ಹಾಗೂ ಸದಸ್ಯರಾಗಿ ಕೂಡಕಂಡಿ ಓಂ ಶ್ರೀದಯಾನಂದ, ಬೊಟ್ಟೋಳಂಡ ನಿವ್ಯ ಕಾವೇರಮ್ಮ, ಸುಮಿತ್ರಾ ಮೂರ್ನಾಡು, ಚೇನಂಡ ಜಯಂತಿ ಹರೀಶ್, ಲವೀನ್ ಲೋಪೇಜ್, ಎನ್.ಬಿ.ದಿಲೀಪ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂದಣ್ಣ ತಿಳಿಸಿದ್ದಾರೆ.