ಶಿರ್ವ : ಹಿರಿಯ ಪಾಡ್ಡಾನಗಾರ್ತಿ, ಕೃಷಿಕೆ, ಪಡುಅಲೆವೂರು ಪೆರುಪಾದೆಯ ಲಕ್ಷ್ಮೀ ಸೇರಿಗಾರ್ತಿ (98) ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 23 ಫೆಬ್ರವರಿ 2025ರಂದು ನಿಧನರಾದರು.
ನಾಟಿಗದ್ದೆಗಳಲ್ಲಿ, ಮದುವೆ ಮನೆಗಳಲ್ಲಿ ತುಳುನಾಡಿನ ವಿವಿಧ ದೈವಗಳ ಸಂಧಿ ಪಾಡ್ಡಾನಗಳನ್ನು ಹಾಡುವ ಮೂಲಕ ಇವರು ಖ್ಯಾತರಾಗಿದ್ದು ಮನೆಮಾತಾಗಿದ್ದರು. ದೈವಾರಾಧಕರಾಗಿದ್ದ ಇವರು ಪಂಜುರ್ಲಿ, ಕೋಟಿ ಚೆನ್ನಯ, ಸಿರಿ ಪಾಗ್ದಾನಗಳನ್ನು ಇತ್ತೀಚಿನವರೆಗೂ ಸುಧೀರ್ಘವಾಗಿ ಹಾಡುತ್ತಿದ್ದರು. ಅವರ ಸಾಧನೆಯನ್ನು ಗುರುತಿಸಿ ಇವರಿಗೆ ದೆಂದೂರು ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ ‘ಕೊಲ್ಲು ಶೆಡ್ತಿ ಸ್ಮರಣಾರ್ಥ ಪಾಡ್ಡಾನ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. ಇವರಿಗೆ ಏಳು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.