ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಹಿರಿಯ ಕವಿ ಮನೆಗೆ ಭೇಟಿ ಕಾರ್ಯಕ್ರಮವು ದಿನಾಂಕ 30 ಆಗಸ್ಟ್ 2025ರಂದು ಮುಸ್ಸಂಜೆ ಗಂಟೆ 6-30ಕ್ಕೆ ಸರಿಯಾಗಿ ನಡೆಯಲಿದೆ.
ಈ ಬಾರಿ ಸಾರಸ್ವತ ಲೋಕಕ್ಕೆ ಐದು ಕೃತಿ ಸಮರ್ಪಿಸಿರುವ ಹಿರಿಯ ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ಇವರ ಮನೆಗೆ ಭೇಟಿ ನೀಡಿ ಅವರನ್ನು ಮನೆಯಲ್ಲೇ ಸನ್ಮಾನಿಸಿ ಪರಿಷತ್ತಿನ ವತಿಯಿಂದ ಗೌರವ ಸಮರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ.ಮಂಜುನಾಥ್ ಎಸ್. ರೇವಣಕರ್ ಇವರು ವಹಿಸಲಿದ್ದು, ಖ್ಯಾತ ವೈದ್ಯ ಸಾಹಿತಿ ಡಾ. ಮುರಲೀ ಮೋಹನ್ ಚೂಂತಾರ್ ಇವರು ಭಾಗವಹಿಸಲಿದ್ದಾರೆ.