Subscribe to Updates

    Get the latest creative news from FooBar about art, design and business.

    What's Hot

    ‘ಸೇವಾ ಭೂಷಣ ಪ್ರಶಸ್ತಿ’ಗೆ ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆ

    February 19, 2026

    ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ‘ನೃತ್ಯ ಸಿಂಚನ’ | ಫೆಬ್ರವರಿ 21

    February 19, 2026

    ಮೈಸೂರಿನಲ್ಲಿ ‘ಹುತ್ತದಲ್ಲಿ ಹುತ್ತ’ ಅಪೂರ್ವ ಹಾಸ್ಯ ನಾಟಕ ಪ್ರದರ್ಶನ | ಫೆಬ್ರವರಿ 22

    February 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಸೇವಾ ಭೂಷಣ ಪ್ರಶಸ್ತಿ’ಗೆ ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆ
    Awards

    ‘ಸೇವಾ ಭೂಷಣ ಪ್ರಶಸ್ತಿ’ಗೆ ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆ

    February 19, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗವು ಎಸ್. ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾ ಭೂಷಣ ಪ್ರಶಸ್ತಿ’ಯನ್ನು 2026ರಿಂದ ಎಚ್.ಎನ್. ಶೃಂಗೇಶ್ವರರ ಹೆಸರನ್ನು ಸೇರಿಸಿ ಈರ್ವರ ನೆನಪಿನಲ್ಲಿ ನೀಡಲು ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಎಸ್. ಗೋಪಾಲ ಕೃಷ್ಣ ಅವರು 27 ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಎಚ್‌.ಎನ್‌. ಶೃಂಗೇಶ್ವರರು ಕಾರ್ಯಕರ್ತರಾಗಿ, ಜೊತೆ ಕಾರ್ಯದರ್ಶಿಯಾಗಿ 35 ವರ್ಷಗಳ ಕಾಲ ಸಂಸ್ಥೆಯ ಬೆಳವಣಿಗೆಗೆ ಕಾರಣರಾಗಿದ್ದರು.

    ಈ ವರ್ಷದ ಸೇವಾ ಭೂಷಣ ಪ್ರಶಸ್ತಿಗೆ ನಿವೃತ್ತ ಬ್ಯಾಂಕ್ ಅಧಿಕಾರಿ, ಹಿರಿಯ ಲೇಖಕ ಯು. ಶ್ರೀಧರ್ ಆಯ್ಕೆಯಾಗಿದ್ದು, ಇವರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವೋಪದೇಶವನ್ನು ಸ್ವತಃ ಮೈಗೂಡಿಸಿಕೊಂಡು ಗುರುಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅದನ್ನು ಉಚಿತವಾಗಿ ಹಂಚುತ್ತಾ ಅವರ ಜೀವನ ಮೌಲ್ಯಗಳನ್ನು ಪ್ರಸಾರ ಮಾಡುತ್ತಾ ನೊಂದವರು, ಸಂಸ್ಥೆಗಳಿಗೆ ನೆರವು ನೀಡುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 27 ಫೆಬ್ರವರಿ 2026ರಂದು ಸಂಸ್ಥೆಯ ಐ.ವೈ.ಸಿ. ಸಭಾಂಗಣದಲ್ಲಿ ಜರಗಲಿದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾ‌ರ್ ತಿಳಿಸಿದ್ದಾರೆ.

    award baikady Literature roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ‘ನೃತ್ಯ ಸಿಂಚನ’ | ಫೆಬ್ರವರಿ 21
    roovari

    Add Comment Cancel Reply


    Related Posts

    ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ‘ನೃತ್ಯ ಸಿಂಚನ’ | ಫೆಬ್ರವರಿ 21

    February 19, 2026

    ಮೈಸೂರಿನಲ್ಲಿ ‘ಹುತ್ತದಲ್ಲಿ ಹುತ್ತ’ ಅಪೂರ್ವ ಹಾಸ್ಯ ನಾಟಕ ಪ್ರದರ್ಶನ | ಫೆಬ್ರವರಿ 22

    February 19, 2026

    50 ವರ್ಷ ಪೂರೈಸಿದ ನಾಟಕ ತಂಡಗಳ ‘ಹೊನ್ನಾರು ನಾಟಕೋತ್ಸವ’ | ಫೆಬ್ರವರಿ 21ರಿಂದ 26

    February 19, 2026

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ಮಿಸ್ತೇರಿಯುಮ್’ ಕೊಂಕಣಿ ಸಂಗೀತ ಕಾರ್ಯಕ್ರಮ | ಫೆಬ್ರವರಿ 20

    February 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.