ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯಪೂರ್ವದ ಮೊದಲ ಸಾಲಿನ ಲೇಖಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ಹಾಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಹಿರಿಯ ಲೇಖಕಿ ಲಲಿತಾ ರೈ ದಿನಾಂಕ 11 ಅಕ್ಟೋಬರ್ 2025ರಂದು ಮಂಗಳೂರಿನ ತನ್ನ ಸ್ವಗೃಹದಲ್ಲಿ ನಿಧನರಾದರು. ಇವರಿಗೆ 98 ವರ್ಷ ವಯಸ್ಸಾಗಿತ್ತು.
ಮಂಗಳೂರಿನ ಬೆಸೆಂಟ್ ಪ್ರೌಢಶಾಲೆಯ ಮೆಟ್ರಿಕ್ ತರಗತಿಯ ಮೊದಲ ತಂಡದ ವಿದ್ಯಾರ್ಥಿನಿಯಾಗಿದ್ದ ಲಲಿತಾ ರೈ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಸೈಂಟ್ ಆನ್ಸ್ ಬಿ. ಎಡ್. ಕಾಲೇಜಿನಲ್ಲಿ ಶಿಕ್ಷಕ ತರಬೇತಿ ಅಧ್ಯಯನ ಮಾಡಿ ಕೆನರಾ ಪ್ರೌಢಶಾಲೆಯಲ್ಲಿ ಅಧ್ಯಾಪಕಿ ವೃತ್ತಿಯನ್ನು ಆರಂಭಿಸಿದ್ದರು.
ಮಂಗಳೂರಿನ ಮಹಿಳಾ ಸಭಾ, ಭಗಿನಿ ಸಮಾಜ ಥಿಯೋಪಿಕಲ್ ಸೊಸೈಟಿಯ ಸ್ಥಾಪಕ ಸಂಸ್ಥೆಯಾಗಿದ್ದ ಲಲಿತಾ ರೈ ಮಹಿಳಾ ಸಬಲೀಕರಣದ ಅನೇಕ ಸೇವಾ ಕಾರ್ಯಗಳಲ್ಲಿ ಮಂಚೂಣಿಯಲ್ಲಿದ್ದರು. ವಿವಿಧ ಸಂದರ್ಭದಲ್ಲಿ ಮಹಿಳಾಪರ ಚಳವಳಿಯಲ್ಲಿಯೂ ಅವರು ಭಾಗಿಯಾಗಿದ್ದರು. ಕರಾವಳಿ ಲೇಖಕಿಯರ ಹಾಗೂ ವಾಚಕೀಯರ ಸಂಘದ ಸಕ್ರೀಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
Subscribe to Updates
Get the latest creative news from FooBar about art, design and business.