ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ಇದರ ವತಿಯಿಂದ ಹಿರಿಯರ ಕವಿಗೋಷ್ಠಿಯನ್ನು ದಿನಾಂಕ 09 ಡಿಸೆಂಬರ್ 2025ರ ಮಂಗಳವಾರ ಮಧ್ಯಾಹ್ನ 2-30 ಗಂಟೆಗೆ ಮಡಿಕೇರಿಯ ಕೊಡಗು ಪತ್ರಿಕೆ ಭವನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಬಿ.ಎ. ಷಂಶುದ್ದೀನ್ ಇವರು ವಹಿಸಲಿದ್ದು, ಕವಿಗೋಷ್ಠಿಯನ್ನು ಕವಿ ಸಾಹಿತಿ, ಕಾಜೂರು ಸತೀಶ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸಾಹಿತಿ ಶ್ರೀಮತಿ ಕೃಪಾ ದೇವರಾಜ್ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಭಾಗವಹಿಸಲಿದ್ದಾರೆ.
ಹಿರಿಯ ಕವಿಗಳಾದ ಕಿಗ್ಗಾಲು ಎಸ್. ಗಿರೀಶ್, ಶ್ರೀಮತಿ ಜಲ ಕಾಳಪ್ಪ, ಮೂಟೆರ ಕೆ. ಗೋಪಾಲಕೃಷ್ಣ, ಶ್ರೀಮತಿ ಕೆ. ಶೋಭಾ ರಕ್ಷಿತ್, ಶ್ರೀಮತಿ ಕಟ್ರತನ ಲಲಿತಾ ಅಯ್ಯಣ್ಣ, ಶ್ರೀಮತಿ ಶ.ಗ. ನಯನತಾರ, ಶ್ರೀಮತಿ ಅಂಬೆಕಲ್ಲು ಸುಶೀಲ ಕುಶಾಲಪ್ಪ, ಬಿ.ಜಿ. ಅನಂತಶಯನ, ವಿದ್ವಾನ್ ಶಂಕರಯ್ಯ ಮಾಸ್ಟರ್, ಶ್ರೀಮತಿ ಭಾಗೀರಥಿ ಹುಳಿತಾಳ, ಶ್ರೀಮತಿ ರೇವತಿ ರಮೇಶ್, ಬಿ.ಬಿ. ನಾಗರಾಜ ಆಚಾರ್, ಶ್ರೀಮತಿ ಕೆ.ಎಸ್. ನಳಿನಿ ಸತ್ಯನಾರಾಯಣ, ಶ್ರೀಮತಿ ಶಿವದೇವಿ ಅವನೀಶ್ಚಂದ್ರ, ಹೆಚ್.ಹೆಚ್. ಸುಂದರ, ಹರೀಶ್ ಸರಳಾಯ, ಶ್ರೀ ಹಾ.ತಿ. ಜಯಪ್ರಕಾಶ್ ಭಾಗವಹಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ತಿಳಿಸಿದ್ದಾರೆ.

