ತೆಕ್ಕಟ್ಟೆ: ರಸರಂಗ (ರಿ.) ಕೋಟ ಸಂಸ್ಥೆಯು ಸುಧಾ ಮಣೂರು ಇವರ ನಿರ್ದೇಶನದ ಪ್ರಸ್ತುತಪಡಿಸಿದ ‘ಶಬರಿ’ ನಾಟಕದ ರಂಗ ಪ್ರಸ್ತುತಿಯು ದಿನಾಂಕ 19 ಜುಲೈ 2025 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಪ್ರಾಚಾರ್ಯರಾದ ದೇವದಾಸ್ ರಾವ್ ಕೂಡ್ಲಿ ಮಾತನಾಡಿ “ಅತೀ ಕಡಿಮೆ ಸಮಯದಲ್ಲಿ “ಶಬರಿ” ಯಕ್ಷನಾಟಕ ಪ್ರಸ್ತುತಿ ಮನೋಜ್ಞವಾಗಿತ್ತು. ರಂಗದ ನಡೆಯನ್ನು ಅರಿತು ನಡೆಯಬೇಕಾದದ್ದನ್ನು ಗಮನಿಸಬೇಕಾದದ್ದು ಕಲಾವಿದರ ಕರ್ತವ್ಯ. ಮಕ್ಕಳ ಮೂಲಕ ರಂಗ ಪ್ರಸ್ತುತಿಯ ಕಾರ್ಯ ಸುಲಭವಲ್ಲ. ಇದನ್ನು ರಸರಂಗ ಸಾಧಿಸಿದೆ” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನಿರ್ದೇಶಕಿ ಸುಧಾ ಮಣೂರು ಮಾತನಾಡಿ “ರಸರಂಗ ಪ್ರಸ್ತುತಿಯ ಮೂರನೆಯ ಯಕ್ಷನಾಟಕ ಪ್ರಯೋಗವಿದು. ಶೂರ್ಪನಖ, ಅಹಲ್ಯಾ ಅಂತರಂಗ, ಶಬರಿ ಈ ನಾಟಕಗಳು ಇದುವರೆಗೆ ರಂಗ ಪ್ರಯೋಗಗೊಂಡಿದ್ದವು. ಪು.ತಿ. ನರಸಿಂಹ ಆಚಾರ್ಯರ ಹತ್ತನೇಯ ತರಗತಿಯ ಪಠ್ಯದಲ್ಲಿನ ಪದ್ಯವನ್ನಾಧರಿಸಿ ಇನ್ನಷ್ಟು ಪದ್ಯವನ್ನು ಜೊತೆಗೂಡಿಸಿ ತೋರಿಸಿದ ನಾಟಕ ಯಶಸ್ಸು ಕಂಡಿತು” ಎಂದರು.
ಕಾರ್ಯದರ್ಶಿ ವೆಂಕಟೇಶ ವೈದ್ಯ, ಶ್ರೀಮತಿ ಪಾರ್ವತಿ, ಶ್ರೀಮತಿ ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Articleಮೂಡುಬಿದಿರೆಯ ಶ್ರೀಜೈನ ಮಠದಲ್ಲಿ ಪಾಕ್ಷಿಕ ತಾಳಮದ್ದಳೆ ಸರಣಿ | ಜುಲೈ 24