ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ ಧಾರವಾಡ ಹಾಗೂ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ ಟ್ರಸ್ಟ (ರಿ.) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 22 ಮತ್ತು 23 ನವೆಂಬರ್ 2025ರಂದು ಎರಡು ದಿನಗಳ ಕನ್ನಡ ರಾಜ್ಯೋತ್ಸವ ಮತ್ತು ಆಧುನಿಕ ಕನ್ನಡ ರಂಗಭೂಮಿ ದಿನದ ಅಂಗವಾಗಿ ‘ಶಾಂತಕವಿ ನಾಟಕೋತ್ಸವ-2025’ವನ್ನು ಧಾರವಾಡದ ಕರ್ನಾಟಕ ಕಾಲೇಜು ಆವರಣ ಸೃಜನಾ ಡಾ. ಅಣ್ಣಾಜಿ ರಾವ್ ಶಿರೂರು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ದಿನಾಂಕ 22 ನವೆಂಬರ್ 2025ರಂದು ಸಂಜೆ 5-30 ಘಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ನಾಟಕೋತ್ಸವ-2025 ಕಾರ್ಯಕ್ರಮವನ್ನು ಹುಬ್ಬಳ್ಳಿ ಧಾರವಾಡ ಪಶ್ಚಿಮ ಮತಕ್ಷೇತ್ರ ಮಾನ್ಯ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಇವರು ಉದ್ಘಾಟಿಸುವರು. ಧಾರವಾಡದ ಸಕ್ಕರಿ ಬಾಳಾಚಾರ್ (ಶಾಂತಕವಿ) ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಶ್ರೀಬಾಬುರಾವ್ ಸಕ್ಕರಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುತ್ತಾರೆ. ದಾವಣಗೆರೆ ವೃತ್ತಿ ರಂಗಭೂಮಿ, ರಂಗಾಯಣ ನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ಕಡಕೋಳ ಇವರು ಮುಖ್ಯ ಅಥಿತಿಗಳಾಗಿರುತ್ತಾರೆ. ಈ ದಿವಸ ಪು.ತಿ. ನರಸಿಂಹಾಚಾರ್ಯರವರು ರಚಿಸಿದ ‘ಗೋಕುಲ ನಿರ್ಗಮನ’ ಎಂಬ ನಾಟಕ ಪ್ರದರ್ಶನವಿರುತ್ತದೆ. ಈ ನಾಟಕವನ್ನು ಈ ಮುಂಚೆ ಡಾ. ಬಿ.ವಿ. ಕಾರಂತರವರು ನಿರ್ದೇಶಿಸಿದ್ದು, ಈಗ ಈ ನಾಟಕವನ್ನು ಟಿ.ಎಸ್. ನಾಗಾಭರಣರವರು ಮರು ವಿನ್ಯಾಸಗೊಳಿಸಿ ಬೆಂಗಳೂರಿನ ಬೆನಕ ರಂಗತಂಡ ಇವರಿಂದ ಪ್ರಸ್ತುತ ಪಡಿಸಲಿದ್ದಾರೆ.
ದಿನಾಂಕ 23 ನವೆಂಬರ್ 2025ರಂದು ನಾಟಕೋತ್ಸವ ಕಾರ್ಯಕ್ರಮದಲ್ಲಿ ಜಿ.ಬಿ. ಜೋಶಿ (ಜಡಭರತ)ರವರು ರಚಿಸಿರುವ ‘ಆ ಊರು ಈ ಊರು’ ಎಂಬ ನಾಟಕ ಪ್ರದರ್ಶನವಿರುತ್ತದೆ. ಈ ನಾಟಕವನ್ನು ಹುಲುಗಪ ಕಟ್ಟೀಮನಿರವರು ನಿರ್ದೇಶಿಸಿ ತೀರ್ಥಹಳ್ಳಿಯ ನಟಮಿತ್ರರು ಇವರಿಂದ ಪ್ರಸ್ತುತ ಪಡಿಸಲಿದ್ದಾರೆ.
ಮೇಲಿನ ಶಾಂತಕವಿ ನಾಟಕೋತ್ಸವ-2025 ಕಾರ್ಯಕ್ರಮಗಳಿಗೆ ಪ್ರವೇಶ ದರವನ್ನು ಕ್ರಮವಾಗಿ ರೂ.1000/-, ರೂ.500/- ಹಾಗೂ ರೂ.200/-ನ್ನು ನಿಗದಿಪಡಿಸಿದೆ. ರೂ.1000/-ಗಳ ಟಿಕೆಟ್‌ಗೆ ರೂ.2,500/- ಬೆಲೆಯ 12 ಗಿಫ್ಟ್ ವೋಚರಗಳನ್ನು ಹಾಗೂ ರೂ.500/- ಟಿಕೆಟ್‌ಗೆ ರೂ.900/-ಗಳ 6 ಗಿಫ್ಟ್ ವೋಚರಗಳನ್ನು ನೀಡಲಾಗುತ್ತದೆ. ರಂಗಾಸಕ್ತರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಹಾಜರಾಗಿ ನಾಟಕಗಳನ್ನು ನೋಡಿ ಪ್ರೋತ್ಸಾಹಿಸಬೇಕಾಗಿ ಕೋರಿದೆ. ಎರಡು ದಿನಗಳ ನಾಟಕ ಪ್ರದರ್ಶನವು ಸರಿಯಾಗಿ ಸಂಜೆ 6-00 ಘಂಟೆಗೆ ಪ್ರಾರಂಭವಾಗುತ್ತದೆ.
