ಮಂಗಳೂರು : ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಕಾಲಾವಧಿ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ದಿವಂಗತ ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 17-04-2024 ರಂದು ಮಂಗಳೂರಿನ ಶರವು ದೇವಸ್ಥಾನದ ವಠಾರದಲ್ಲಿ ನಡೆಯಿತು.
ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣಾ ಪ್ರಶಸ್ತಿಯನ್ನು ಧಾರ್ಮಿಕ , ಕಲಾ, ವಿದ್ಯಾ, ಹಾಗೂ ಅತ್ಯುತ್ತಮ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಾನ್ಯರಿಗೆ ನೀಡುತ್ತಾ ಬಂದಿದ್ದು, ಈ ಸಾಲಿನ ಪ್ರಶಸ್ತಿಯನ್ನು ವೇದಮೂರ್ತಿ ಅತ್ತೂರು ಜಯರಾಮ ಉಡುಪರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಚಿನ್ನದ ಪದಕ, ಗೌರವ ಸಂಭಾವನೆ, ಗೌರವ ಪತ್ರವನ್ನು ಒಳಗೊಂಡಿತ್ತು.
ಶರವು ಕ್ಷೇತ್ರದ ಶಿಲೆ ಶಿಲೆ ಮೋಕ್ತೇಸರಾದ ಶರವು ರಾಘವೇಂದ್ರ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ. ರಘುನಾಥ ಸೋಮಯಾಜಿ ಭಾಗವಹಿಸಿದ್ದರು. ಸುಧಾಕರ ರಾವ್ ಪೇಜಾವರ ಇವರು ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣೆ ಮತ್ತು ಪ್ರಶಸ್ತಿ ಪುರಸ್ಕೃತರಾದ ಅತ್ತೂರು ಜಯರಾಮ ಉಡುಪರ ಅಭಿನಂದನೆಗೈದರು. ವೇದಿಕೆಯಲ್ಲಿ ಡಾಕ್ಟರ್ ಸುಧೇಶ್ ಶಾಸ್ತ್ರಿ ಶರವು, ರಾಹುಲ್ ಶಾಸ್ತ್ರಿ ಶರವು, ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಗಿರಿ ಪ್ರಕಾಶ್ ತಂತ್ರಿ ಪೊಳಲಿ ಉಪಸ್ಥಿತರಿದ್ದರು. ಪ್ರಕಾಶ್ ಚಂದ್ರ ರಾವ್ ಸ್ವಾಗತಿಸಿ, ಅನಂತ ರಾಮ್ ವಂದಿಸಿದರು.
ಪ್ರಶಸ್ತಿಯನ್ನು ಪಡೆದ ಉಡುಪರು ಮಂಗಳೂರು ನೆಲ್ಲಿಕಾಯಿ ರಾಘವೇಂದ್ರ ಮಠದ ಪ್ರಧಾನ ಅರ್ಚಕರಾಗಿ ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಮತ್ತು ಸ್ವತಃ ಸಂಗೀತ, ಚಿತ್ರ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕದ್ರಿ ಮಲ್ಲಿಕಾ ಕಲಾ ವೃಂದದ ಮಕ್ಕಳ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ನಲವತ್ತು ಮಂದಿ ಭಾಗವಹಿಸಿ ನೆರೆದ ಪ್ರೇಕ್ಷಕರನ್ನು ರಂಜಿಸಿದರು.