ಕಾಸರಗೋಡು : ಕಾಸರಗೋಡು ಇಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.) ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ರಂಗಚಿನ್ನಾರಿ ಇದರ ಮಹಿಳಾ ಘಟಕ ನಾರಿ ಚಿನ್ನಾರಿಯ 10ನೇ ಸರಣಿ ಕಾರ್ಯಕ್ರಮ ‘ಶರದ್ವಿಲಾಸ’ ದಿನಾಂಕ 29-10- 2023 ಆದಿತ್ಯವಾರ ಅಪರಾಹ್ನ ಗಂಟೆ 2.30 ರಿಂದ ಕಾಸರಗೋಡು ಕರಂದಕ್ಕಾಡು ಇಲ್ಲಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಹೆಸರಾಂತ ಲೇಖಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಉದ್ಘಾಟಿಸಲಿದ್ದು, ನಾರಿ ಚಿನ್ನಾರಿಯ ಕಾರ್ಯಾಧ್ಯಕ್ಷರಾದ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೊರಗ ಸಮುದಾಯದ ಮೊದಲ ಮಹಿಳಾ ಸಾಧಕಿ ಮೀನಾಕ್ಷಿ ಬೊಡ್ಡೋಡಿ ಹಾಗೂ ಮಹಿಳಾ ಉದ್ಯಮಿ ಬಿಂದು ದಾಸ್ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಕವಯತ್ರಿ ವನಜಾಕ್ಷಿ ಚೆಂಬ್ರಕಾನ ಮೀನಾಕ್ಷಿ ಬೊಡ್ಡೋಡಿ ಇವರನ್ನು ಹಾಗೂ ನಾರಿ ಚಿನ್ನಾರಿಯ ಜತೆ ಕಾರ್ಯದರ್ಶಿ ಸರ್ವಮಂಗಳ ಜಯ್ ಪುಣಿಚಿತ್ತಾಯ ಬಿಂದು ದಾಸ್ ಇವರನ್ನು ಪರಿಚಯಿಸಲಿದ್ದಾರೆ.
ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರ್ಣಾ ಶೆಟ್ಟಿ ಮತ್ತು ನಂದನ ಇವರಿಂದ ಭರತನಾಟ್ಯ, ಕಾವ್ಯ ಎನ್. ಇವರಿಂದ ಕನ್ನಡ ಭಾವಗೀತೆ, ಧನ್ಯಾ ಕೃಷ್ಣಪ್ರಸಾದ್ ಇವರಿಂದ ಮೋಹಿನಿಯಾಟ್ಟಂ, ಸರೋಜ ಸುಬ್ರಹ್ಮಣ್ಯ ಭಟ್ ಇವರಿಂದ ಶಾಸ್ತ್ರೀಯ ಸಂಗೀತ, ಪ್ರಿಯಾಂಕ ರಜಿತ್ ಇವರಿಂದ ನೃತ್ಯ ರೂಪಕ, ಸುಜಾತ ಕನಿಯಾಲ ಇವರಿಂದ ತುಳು ಜಾನಪದ ಗೀತೆ, ಅನ್ವಿತಾ ಕಾಮತ್ ಇವರಿಂದ ವೀಣಾ ವಾದನ, ಶೀನಾ ಶಿವದಾಸ್ ಇವರಿಂದ ಮಲಯಾಳ ಜಾನಪದ ಹಾಡು ಹಾಗೂ ಶ್ರೀ ಲಕ್ಷ್ಮೀ ಶೆಣೈ ಇವರಿಂದ ಹರಿಕಥೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ನಾರಿ ಚಿನ್ನಾರಿಯ ಅಧ್ಯಕ್ಷರಾದ ಸವಿತಾ ಟೀಚರ್, ಪ್ರಧಾನ ಕಾರ್ಯದರ್ಶಿಯಾದ ದಿವ್ಯಾ ಗಟ್ಟಿ ಪರಕ್ಕಿಲ, ‘ನಾರಿ ಚಿನ್ನಾರಿ’ಯ ಸದಸ್ಯೆಯರು ಹಾಗೂ ರಂಗ ಚಿನ್ನಾರಿಯ ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ., ಕೆ. ಸತೀಶ್ಚಂದ್ರ ಭಂಡಾರಿ ಹಾಗೂ ಮನೋಹರ ಶೆಟ್ಟಿ ಎಲ್ಲರಿಗೂ ಆತ್ಮೀಯ ಸ್ವಾಗತ ಬಯಸಿದ್ದಾರೆ.