ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ನಗರ ಘಟಕದ ‘ಷಷ್ಠಮ ಸಂಭ್ರಮ’ವನ್ನು ದಿನಾಂಕ 28 ಮಾರ್ಚ್ 2025ರಂದು ಸಂಜೆ 3-30 ಗಂಟೆಗೆ ಮಂಗಳೂರು ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜೆಪ್ಪು ಅರೆಕೆರೆಬೈಲ್ ಅಂಬಾ ಮಹೇಶ್ವರಿ ಭಜನಾ ಮಂಡಳಿ ಇದರ ಅಧ್ಯಕ್ಷರಾದ ಸೀತಾರಾಮ್ ಎ. ಇವರ ಅಧ್ಯಕ್ಷತೆಯಲ್ಲಿ ಕುಡ್ಲ ಅರ್ಥ್ ಮೂವರ್ಸ್ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ ಇವರು ಈ ಕಾರ್ಯಕ್ರಮವನ್ನು ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಪುತ್ತೂರು ದೇವರಾಜ ಹೆಗ್ಡೆ ಇವರಿಗೆ ‘ಯಕ್ಷಧ್ರುವ ಸಾಧನಾ’ ಪ್ರಶಸ್ತಿ ಪ್ರಧಾನ, ಹಿರಿಯ ರಂಗ ಕಲಾವಿದ ಶೇಖರ್ ಶೆಟ್ಟಿ ಹೊಯಿಗೆಬೈಲು ಇವರಿಗೆ ವಿಶೇಷ ಆರ್ಥಿಕ ನೆರವು ಹಾಗೂ ಪೂರ್ಣೇಶ್ ಆಚಾರ್ಯ ಮತ್ತು ರವಿ ಶೆಟ್ಟಿ ಕುಂಬ್ಳೆ ಇವರುಗಳಿಗೆ ಗೌರವ ಸಹಾಯಧನದೊಂದಿಗೆ ಸನ್ಮಾನ ಮಾಡಲಾಗುವುದು.
3-45 ಗಂಟೆಗೆ ಯಕ್ಷ ಹಾಸ್ಯ ವೈಭವ, 4-30 ಗಂಟೆಗೆ ಕಾವು ಶ್ರೀ ಪಂಚಲಿಂಗೇಶ್ವರ ಮಹಿಳಾ ಯಕ್ಷವೃಂದದವರಿಂದ ‘ಶಿವನಂದಿ’ ನೃತ್ಯರೂಪಕ ಮತ್ತು 6-00 ಗಂಟೆಗೆ ಶ್ರೀಲಲಿತೆ ಕಲಾವಿದರು (ರಿ.) ಇವರಿಂದ ಜೀವನ ಉಳ್ಳಾಲ್ ಇವರ ನಿರ್ದೇಶನದಲ್ಲಿ ‘ಶನಿ ಮಹಾತ್ಮೆ’ ತುಳು ಪೌರಾಣಿಕ ನಾಟಕ ಪ್ರಸ್ತುತಗೊಳ್ಳಲಿದೆ.