ಮೈಸೂರು : ಸ್ಟೇಜ್ ಬೆಂಗಳೂರು ಅಭಿನಯಿಸುವ ‘ಶಾಶ್ವತ ಪರಿಹಾರ’ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 09 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಡಾ. ಬೇಲೂರು ರಘುನಂದನ್ ಇವರು ರಚಿಸಿ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗೆ 72595 37777, 90088 30011 ಮತ್ತು 83102 98978 ಸಂಖ್ಯೆಯನ್ನು ಸಂಪರ್ಕಿಸಿರಿ.

ಸ್ಟೇಜ್ ಬೆಂಗಳೂರು ಕರ್ನಾಟಕ ಸರ್ಕಾರದ ಅಧೀನದಲ್ಲಿ ನೋಂದಾಯಿತ ಸಂಸ್ಥೆಯಾಗಿದ್ದು, ಯುವ ಪೀಳಿಗೆ ಮತ್ತು ರಂಗಭೂಮಿ ಉತ್ಸಾಹಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯೊಂದಿಗೆ ದಿನಾಂಕ 07 ಏಪ್ರಿಲ್ 2019ರಂದು ಸ್ಥಾಪಿಸಲಾಗಿದೆ. ಇದು ಭಾರತದಾದ್ಯಂತ ವ್ಯವಸ್ಥಿತವಾಗಿ ಸಾಂಸ್ಕೃತಿಕ ಮತ್ತು ನಾಟಕ ಪ್ರದರ್ಶನಗಳ ಪ್ರಚಾರ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದೆ. ನಾವು ವೃತ್ತಿಪರವಾಗಿ ಸಾಂಸ್ಕೃತಿಕ ಮತ್ತು ರಂಗಭೂಮಿ ಸಂಬಂಧಿತ ಚಟುವಟಿಕೆಗಳಲ್ಲಿ ತರಬೇತಿ, ಅಭ್ಯಾಸ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇವೆ.
ಸ್ಟೇಜ್ ಬೆಂಗಳೂರು ಥಿಯೇಟರ್ ತಂಡವು ವಿವಿಧ ಐಟಿ ಕಂಪನಿಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಪ್ರದರ್ಶನ ಕಲೆ ಆಧಾರಿತ ಶಿಕ್ಷಣ ಮತ್ತು ನಾಟಕ ಶಿಕ್ಷಣವನ್ನು ನೀಡಿದೆ. ಸ್ಟೇಜ್ ಬೆಂಗಳೂರು ಥಿಯೇಟರ್ ತಂಡವು ತನ್ನ 4+ ವರ್ಷಗಳ ಪಯಣದಲ್ಲಿ ರಾಜ್ಯಾದ್ಯಂತ 3+ ನಾಟಕೋತ್ಸವ ಮತ್ತು ಅನೇಕ ನಾಟಕ ಪ್ರದರ್ಶನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಸಂಸ್ಥೆಯು ರಂಗಭೂಮಿಯ ಜೊತೆಗೆ ಸಿನೆಮಾ, ಕಿರುಚಿತ್ರ, ಕ್ರೀಡೆ, ಸಂಗೀತ, ನೃತ್ಯ, ಮಾಡಲ್ಲಿಂಗ್, ಮೇಕ್ಅಪ್, ಕಾರ್ಪೊರೇಟ್ ಇವೆಂಟ್ಗಳು, ಸಮಾಜಮುಖಿ ಕೆಲಸಗಳು, ಮಕ್ಕಳ ಕಾರ್ಯಕ್ರಮಗಳು ಹೀಗೆ ಅನೇಕ ಚಟುವಟಿಕೆಗಳನ್ನು ನಡೆಸಿ ಯಶಸ್ವಿಯಾಗಿದೆ.
