ಸುಳ್ಯ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಹಳೆಗೇಟು ಸುಳ್ಯ ಮತ್ತು ಮಹಾಬಲ ಲಲಿತ ಕಲಾ ಸಭಾ (ರಿ.) ಪುತ್ತೂರು ಇದರ ಸಹಯೋಗದಲ್ಲಿ ‘ಶಾಸ್ತ್ರೀಯ ಸಂಗೀತ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 08 ಡಿಸೆಂಬರ್ 2024ರಂದು ಸಂಜೆ ಗಂಟೆ 5-45ಕ್ಕೆ ಸುಳ್ಯ ರಂಗಮನೆ ಹಳೆಗೇಟು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಪದ್ಮ ಭೂಷಣ ವಿಶ್ವ ಮೋಹನ ಭಟ್ ಇವರ ಪುತ್ರ ತಂತಿ ಸಾಮ್ರಾಟ್ ಪಂಡಿತ್ ಸಲಿಲ್ ವಿ. ಭಟ್ ಇವರ ಸಾತ್ವಿಕ ವೀಣಾ ವಾದನಕ್ಕೆ ಶ್ರೀ ಹಿಮಾಂಶು ಮಹಂತ್ ವಡೋದರ ತಬಲ ಸಾಥ್ ನೀಡಲಿದ್ದಾರೆ ಮತ್ತು ಸುರಮಣಿ ಮಹಾಲಕ್ಷ್ಮೀ ಶೆಣೈ ಕಾರ್ಕಳ ಇವರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಶ್ರೀ ವಿಶ್ವನಾಥ್ ಭಟ್ ಎಣ್ಣೆಹೊಳೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.