ಕಾರ್ಕಳ : ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಸಹಯೋಗದಲ್ಲಿ ಕೆ.ಎನ್.ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವದ ಪ್ರಯುಕ್ತ ದಿನಾಂಕ 15-11-2023ರಂದು ಸರಕಾರಿ ಹೈಸ್ಕೂಲ್ ಸಭಾಭವನದಲ್ಲಿ ಶತನಮನ ಶತಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಕಳದ ಸಾಹಿತ್ಯಾಸಕ್ತ ಮಹಿಳಾ ಸಾಧಕಿಯರಾದ ದ್ವಿಭಾಷಾ ಸಾಹಿತಿ ಸುಲೋಚನ ತಿಲಕ್, ನಿವೃತ್ತ ಶಿಕ್ಷಕಿ ಸಾವಿತ್ರಿ ಮನೋಹರ್, ನಿವೃತ್ತ ಅಂಗ್ಲಭಾಷಾ ಉಪನ್ಯಾಸಕಿ ಶ್ಯಾಮಲಾ ಕುಮಾರಿ ಬೇವಿಂಜೆ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಅಧ್ಯಕ್ಷ ಮಿತ್ರಪ್ರಭಾ ಹೆಗ್ಡೆ, ಸಾಹಿತಿಕ ಶೈಕ್ಷಣಿಕ ಮತ್ತು ಧಾರ್ಮಿಕ ಸಂಘಟಕಿ ಮಾಲತಿ ವಸಂತರಾಜ್ ಹಾಗೂ ಸಾಹಿತಿ ಮತ್ತು ಪತ್ರಿಕಾ ಬರಹಗಾರ್ತಿ ಮನೋರಮಾ ರೈ ಅವರನ್ನು ಕೆ.ಎನ್. ಭಟ್ ಶಿರಾಡಿಫಾಲ್ ಅವರ ಪುತ್ರಿಯರಾದ ಅನುಪಮಾ ಚಿಪ್ಳೂಣಕರ್, ವಿದ್ಯಾ ಡೋಂಗ್ರೆ ಹಾಗೂ ನಿವೇದಿತಾ ಗಜೇಂದ್ರ ಇವರುಗಳು ಸನ್ಮಾನಿಸಿದರು. ಸುಲೋಚನಾ ಬಿ.ವಿ., ವಸುಧಾ ಶೆಣೈ ಶಕುಂತಲಾ ಅಡಿಗ, ಡಾ. ಸುಮತಿ ಪಿ., ನಿವೇದಿತಾ ಗಜೇಂದ್ರ ಹಾಗೂ ಇಂದಿರಾ ಸನ್ಮಾನ ಪತ್ರ ವಾಚಿಸಿದರು.
ಸನ್ಮಾನ ಸ್ವೀಕರಿಸಿದ ಸಾಹಿತಿ ಶ್ಯಾಮಲಾ ಕುಮಾರಿ ಬೇವಿಂಜೆ ಮತ್ತು ಸಾವಿತ್ರಿ ಮನೋಹರ್ ಅವರು ಶಿರಾಡಿಪಾಲರ ಜೊತೆಗಿನ ತಮ್ಮ ಒಡನಾಟದ ಅನುಭವವನ್ನು ಹಂಚಿಕೊಂಡರು. ಮಿತ್ರಪ್ರಭಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮುರಾರಿ ಚಿಪ್ಳೂಣಕರ್, ವಸಂತ ಡೋಂಗ್ರೆ ಉಪಸ್ಥಿತರಿದ್ದರು. ನಿವೇದಿತಾ ಗಜೇಂದ್ರ ಪ್ರಾರ್ಥಿಸಿ, ವಿದ್ಯಾ ಡೋಂಗ್ರೆ ಸ್ವಾಗತಿಸಿ, ಸಂಘಟಕ ಕೃಷ್ಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಪಮಾ ಚಿಪ್ಳೂಣಕರ್ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಜಾಗೃತಿ ಸಂಘಟನೆಯ ಕಾರ್ಯದರ್ಶಿ ಮಾಲತಿ ಜಿ. ಪೈ ನಿರೂಪಿಸಿದರು.