ಕುಂದಾಪುರ : ಸಂಗೀತ ಭಾರತಿ ಟ್ರಸ್ಟ್ ಮತ್ತು ಕುಂದಾಪುರ ಭಂಡಾರ್ ಕರ್ಸ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ ‘ಶಿಶಿರ ಸಂಗೀತ ಮಹೋತ್ಸವ’ವು ದಿನಾಂಕ 28 ಡಿಸೆಂಬರ್ 2025ರಂದು ಕಾಲೇಜಿನ ರಂಗ ಅಧ್ಯಯನ ಕೇಂದ್ರದಲ್ಲಿ ನಡೆಯಿತು.

ದಿ. ಎ. ವೈಕುಂಠ ಹೆಬ್ಬಾರ್ ಹಾಗೂ ದಿ. ಅವಿನಾಶ್ ಹೆಬ್ಬಾರ್ ಸ್ಮರಣಾರ್ಥ ಏರ್ಪಡಿಸಿದ ಈ ಕಾರ್ಯಕ್ರಮವನ್ನು ಖ್ಯಾತ ಗಾಯಕರಾದ ಓಂಕಾರ್ ಹವಾಲ್ದಾರ್ ಮತ್ತು ಮಾನಸಿ ಶಾಸ್ತ್ರಿ ಬೆಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಗೀತ ಭಾರತಿ ಟ್ರಸ್ಟ್ ಅಧ್ಯಕ್ಷ ಕೆ. ಶ್ರೀಧರ ಕಾಮತ್, ಭಂಡಾರ್ ಕರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ. ಶಾಂತಾರಾಮ ಪ್ರಭು, ಸಂಗೀತ ಭಾರತಿ ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ಕೆ., ಟ್ರಸ್ಟಿಗಳಾದ ಕೆ. ಸೀತಾರಾಮ ನಕ್ಕತ್ತಾಯ, ಡಾ. ಎಚ್.ಆರ್. ಹೆಬ್ಬಾರ್, ಡಾ. ಆದರ್ಶ ಹೆಬ್ಬಾರ್, ಸುಪ್ರಸನ್ನ ನಕ್ಕತ್ತಾಯ, ರೇಖಾ ಕಾರಂತ್ ಉಪಸ್ಥಿತರಿದ್ದರು.

ಕಲಾವಿದರಾದ ಸಿತಾರ್ ವಾದಕ ಅರ್ಜುನ್ ಆನಂದ ಬೆಂಗಳೂರು, ತಬಲಾ ಕಲಾವಿದರಾದ ಸಾಗರ್‌ಭರತ್ ರಾಜ್ ಬೆಂಗಳೂರು, ವಿಘ್ನೇಶ್ ಕಾಮತ್ ಕೋಟೇಶ್ವರ, ಹಾರ್ಮೋನಿಯಮ್ ಕಲಾವಿದ ಶ್ರೀಧರ್ ಭಟ್ ಕೋಟೇಶ್ವರ, ಯುಕ್ತಾ ಹೊಳ್ಳ ಕುಂದಾಪುರ ಭಾಗವಹಿಸಿದ್ದರು. ಕೆ. ಶ್ರೀಧರ ಕಾಮತ್ ಸ್ವಾಗತಿಸಿದರು. ರಾಮ್ ಮೋಹನ್ ಕಾರಂತ್ ಅವರು ದಿ. ಎ. ವೈಕುಂಠ ಹೆಬ್ಬಾರ್ ಹಾಗೂ ದಿ. ಅವಿನಾಶ್ ಹೆಬ್ಬಾರ್ ಇವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಹಿಂದುಸ್ತಾನಿ ಗಾಯಕರನ್ನು ಕುಂದಾಪುರದಲ್ಲಿ ಪರಿಚಯಿಸುವಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಸ್ಮರಿಸಿದರು. ಕೆ. ವಿವೇಕ್ ಪೈ. ಡಾ. ಎಚ್.ಆರ್. ಹೆಬ್ಬಾರ್, ನಾರಾಯಣ ಕೆ. ಕಲಾವಿದರನ್ನು ಪರಿಚಯಿಸಿದರು. ಸಂಗೀತ ಭಾರತಿ ಟ್ರಸ್ಟಿನ ವಿಶ್ವಸ್ಥರಾದ ಯು.ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.

