ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಿನಾಂಕ 06 ಮತ್ತು 07 ಫೆಬ್ರವರಿ 2025ರಂದು ಶಿವಮೊಗ್ಗ ಗೋಪಿಶೆಟ್ಟಿಕೊಪ್ಪ ಚಾಲುಕ್ಯನಗರ, ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಲಾಗಿದೆ.
ದಿನಾಂಕ 06 ಫೆಬ್ರವರಿ 2025ರಂದು ಬೆಳಿಗ್ಗೆ 9-30 ಗಂಟೆಗೆ ರಾಷ್ಟ್ರ, ನಾಡ ಮತ್ತು ಪರಿಷತ್ ಧ್ವಜಾರೋಹಣ ನಡೆಯಲಿದ್ದು, 10-00 ಗಂಟೆಗೆ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಎಸ್. ರವಿಕುಮಾರ್ ಇವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶ್ರೀಮತಿ ಸಹನಾ ಜಿ. ಭಟ್ ಸಾಗರ, ಶ್ರೀ ಎಸ್. ನಾರಾಯಣ ವಿದ್ಯಾನಗರ ಮತ್ತು ಡಾ. ರಾಜೇಂದ್ರ ಶಿರಾಳಕೊಪ್ಪ ಇವರಿಂದ ಹಾಡುಗಾರಿಕೆ, ಖ್ಯಾತ ಸಾಹಿತಿಗಳಾದ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಇವರು ದೀಪ ಬೆಳಗಿ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಸಚಿವರಾದ ಶ್ರೀ ಮಧು ಬಂಗಾರಪ್ಪ ಇವರಿಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸರುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರಿಂದ ಡಾ. ಜೆ.ಕೆ.ಆರ್.ರವರ ‘ಇಂಡಿಯಾದ ಹೊರಗೊಂದು ಹಣಕು’ ಮತ್ತು ವಿ ಚಂದ್ರೇಗೌಡರವರ ‘ದೇಶಾಂತರ ಕಾದಂಬರಿ’, ಮಾನ್ಯ ಕುಲಪತಿಗಳಾದ ಡಾ. ಶರತ್ ಅನಂತಮೂರ್ತಿ ಇವರಿಂದ ಡಾ. ಜೆ.ಕೆ.ಆರ್. ಅವರ ‘ಮಲೆ ಸೀಮೆಯ ಕಥೆಗಳು’ ಮತ್ತು ಪ್ರೊ. ಸತ್ಯನಾರಾಯಣರವರ ‘ಅಂತರಂಗದ ಸುತ್ತ ಹನಿಗವನ ಸಂಕಲನ ಹಾಗೂ ಮಾನ್ಯ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾ ನಾಯ್ಕ ಇವರಿಂದ ಡಾ. ಶ್ರೀಪತಿ ಹಳಗುಂದ ವಿಮರ್ಶಾ ಕೃತಿ ‘ಚಿತ್ರ ಚಿಂತನ’ ಮತ್ತು ‘ವಿಲೋಚನ’ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಮಧ್ಯಾಹ್ನ 1-00 ಗಂಟೆಗೆ ಭದ್ರಾವತಿಯ ಕರ್ನಾಟಕ ಜಾನಪದ ಪರಿಷತ್ತು ಕಲಾ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, 1-30 ಗಂಟೆಗೆ ವಿಶ್ರಾಂತ ಪ್ರಾಧ್ಯಾಪಕರಾದ ಶ್ರೀಮತಿ ವಿಜಯಾದೇವಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, 4-00 ಗಂಟೆಗೆ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಲ್.ಸಿ. ಸುಮಿತ್ರಾ ಇವರ ಅಧ್ಯಕ್ಷತೆಯಲ್ಲಿ ‘ಸಮ್ಮೇಳನಾಧ್ಯಕ್ಷರ ಬದುಕು ಬರಹ’ ಸಂವಾದ, ಸಂಜೆ 5-30 ಗಂಟೆಗೆ ಶ್ರೀ ನೀಲಪ್ಪ ಬಿ.ಸಿ., ಶ್ರೀಮತಿ ನಳಿನಾಕ್ಷಿ, ಕುಮಾರಿ ದೀಪ್ತಿ ಶಿವಕುಮಾರ್, ಶ್ರೀಮತಿ ಲಕ್ಷ್ಮೀ ಮಹೇಶ್ ಮತ್ತು ಶ್ರೀ ಹರೀಶ್ ಇವರಿಂದ ಸಾಂಸ್ಕೃತಿಕ ಸಂಜೆ, 6-00 ಗಂಟೆಗೆ ‘ಜಾಗತೀಕರಣ ಮತ್ತು ಕನ್ನಡ ಅಸ್ಮಿತೆ’ ಸಂವಾದದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರ ‘ಕನ್ನಡ ಭಾಷೆ’, ಸಾಹಿತಿ ಡಾ. ಸರ್ಫ್ರಾಜ್ ಚಂದ್ರಗುತ್ತಿ ಇವರು ‘ಸಂಸ್ಕೃತಿ’ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಜಿ.ಕೆ. ಪ್ರೇಮಾ ಇವರು ‘ಜನಪದ’ ಎಂಬ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. 7-30 ಗಂಟೆಗೆ ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರ ಜೊತೆಗೆ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಸಂವಾದ ಸಾದೃಶ್ಯ–ವೈದೃಶ್ಯಗಳು ಪ್ರಸ್ತುತಗೊಳ್ಳಲಿದೆ. ಶಿವಮೊಗ್ಗ ಪಬ್ಲಿಕ್ ಸ್ಕೂಲ್ ಚಾಲುಕ್ಯ ನಗರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.
ದಿನಾಂಕ 07 ಫೆಬ್ರವರಿ 2025ರಂದು ಬೆಳಿಗ್ಗೆ 9-30 ಗಂಟೆಗೆ ರಾಷ್ಟ್ರ, ನಾಡ ಮತ್ತು ಪರಿಷತ್ ಧ್ವಜಾರೋಹಣ ನಡೆಯಲಿದ್ದು, 10-00 ಗಂಟೆಗೆ ಶ್ರೀಮತಿ ಲಲಿತಮ್ಮ ವಿಠಲದಾಸ್ ಮತ್ತು ಶ್ರೀಮತಿ ಪ್ರತಿಮಾ ನಾಗರಾಜ್ ಇವರಿಂದ ಮುಂಜಾನೆ ರಸಗಳಿಗೆ, 10-30 ಗಂಟೆಗೆ ‘ಕನ್ನಡ ಸಾಹಿತ್ಯ ಈಚಿನ ಕಥನಕ್ರಮ’ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ಮೇಟಿ ಮಲ್ಲಿಕಾರ್ಜುನ ಇವರು ‘ಕಥಾ ಪ್ರಕಾರ’, ಸಾಹಿತಿ ಶ್ರೀಮತಿ ಅಕ್ಷತಾ ಹುಂಚದಕಟ್ಟೆ ಇವರು ‘ಕಾವ್ಯ ಪ್ರಕಾರ’ ಮತ್ತು ಸಾಹಿತಿ ಡಾ. ಸಬಿತಾ ಬನ್ನಾಡಿ ಇವರು ‘ವಿಮರ್ಶಾ ಸಾಹಿತ್ಯ’ ಎಂಬ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. 12-00 ಗಂಟಗೆ ಶ್ರೀ ರಾಜ್ ಕುಮಾರ್ ಮತ್ತು ಶ್ರೀಮತಿ ದಾಕ್ಷಾಯಿಣಿ ರಾಜ್ ಕುಮಾರ್ ಇವರಿಂದ ಸಾಂಸ್ಕೃತಿಕ ಮಧ್ಯಾಹ್ನ, 12-30ಕ್ಕೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾನ್ಯ ಅಧ್ಯಕ್ಷರಾದ ಡಾ. ಆರ್.ಎಂ. ಮಂಜುನಾಥ ಗೌಡರು ಇವರ ಅಧ್ಯಕ್ಷತೆಯಲ್ಲಿ ‘ಮಲೆನಾಡು-ಬದುಕಿನ ಸವಾಲು’ ಸಂವಾದ, 2-00 ಗಂಟೆಗೆ ಶ್ರೀ ಗಂಗಾ ನಾಯ್ಕ, ಶ್ರೀಮತಿ ಶಶಿರೇಖಾ ಭಟ್, ಶ್ರೀ ಬಸವರಾಜ್ ಇವರಿಂದ ಸಾಂಸ್ಕೃತಿಕ ಮಧ್ಯಾಹ್ನ, 2-30 ಗಂಟೆಗೆ ಪತ್ರಕರ್ತರು ಸಾಹಿತಿಗಳಾದ ಶ್ರೀ ಗೋಪಾಲ ಯೆಡೆಗೆರೆ ಇವರ ಅಧ್ಯಕ್ಷತೆಯಲ್ಲಿ ‘ಕಥೆ ಹೇಳುವೆವು ಕೇಳಿ’ ಕಾರ್ಯಕ್ರಮ, 4-30 ಗಂಟೆಗೆ ಮಾನ್ಯ ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ ಇವರ ಅಧ್ಯಕ್ಷತೆಯಲ್ಲಿ ‘ಮಾಧ್ಯಮ ಬದ್ಧತೆಗಳು’ ಸಂವಾದ, 5-30 ಗಂಟೆಗೆ ‘ಕುವೆಂಪು ಸಾಹಿತ್ಯ ವಚನಗಳು’ ವಿಶೇಷ ಉಪನ್ಯಾಸ ಹಾಗೂ 6-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.