ಕಿನ್ನಿಗೋಳಿ : ಶಿವಪ್ರಣಾಮ್ ನೃತ್ಯ ಸಂಸ್ಥೆ ಕಿನ್ನಿಗೋಳಿ ಇದರ ದಶಸಂಭ್ರಮದ ಕಾರ್ಯಕ್ರಮ ‘ಶಿವಾಂಜಲಿ – 2024’ ಯುಗಪುರುಷ ಕಿನ್ನಿಗೋಳಿ ಇವರ ಸಹಕಾರದೊಂದಿಗೆ ದಿನಾಂಕ 08-06-2024ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪ್ರಾರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ವಿದ್ಯಾರ್ಥಿಗಳು ವಿದ್ಯೆಯ ಜೊತೆ ನೃತ್ಯ ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಜೀವನದಲ್ಲಿ ಯಶಸ್ವಿಗೊಳುತ್ತಾರೆ.” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಿನ್ನಿಗೋಳಿ ಯುಗಪುರುಷ ಸಂಸ್ಥೆಯ ಕೆ. ಭುವನಾಭಿರಾಮ ಉಡುಪ ಮಾತನಾಡಿ “ಕಲಾ ಪ್ರಕಾರಗಳಲ್ಲಿ ಭರತನಾಟ್ಯ ಕಲೆಗಾರಿಕೆಗೆ ವಿಶ್ವಮಾನ್ಯತೆ ಇದೆ.” ಎಂದರು. ನಾಟ್ಯ ಗುರು ಶ್ರೀಧರ ಹೊಳ್ಳ ಮತ್ತು ಗುರು ವಿದುಷಿ ಪ್ರತೀಮಾ ಶ್ರೀಧರ್ ಹಾಗೂ ಶಿವಪ್ರಣಾಮ್ ನೃತ್ಯ ಸಂಸ್ಥೆಯ ನಿರ್ದೇಶಕಿಯಾದ ಅನ್ನಪೂರ್ಣ ರಿತೇಶ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಯುವ ಕಲಾವಿದರಾದ ವಿದುಷಿ ಪ್ರಕ್ಷಿಲಾ ಜೈನ್, ವಿದುಷಿ ಅಂಕಿತ ರೈ, ಅದಿತಿ ಲಕ್ಷ್ಮಿ, ಪೂರ್ವಿಕ ಹಾಗೂ ಗಾರ್ಗಿ ದೇವಿ ಇವರಿಂದ ನೃತ್ಯಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಿವಪ್ರಣಾಮ್ ನೃತ್ಯ ಸಂಸ್ಥೆಯ ವಿದ್ಯಾರ್ಥಿ ಹಿತಾ ಉಮೇಶ್ ನಿರೂಪಿಸಿದರು.