ಮಂಗಳೂರು, ಫೆಬ್ರವರಿ 4:
“ಕಾಲನಾಗಿಹ ಶಿವನು ಹಳೆ ಶಾಸ್ತ್ರಗಳ ಸುಡುತ ಹೊಸ ಚಿಗುರ ಚಿಗುರಿಸುತ ಜೊತೆಯಲಿರುವ” “ಶೂದ್ರ ಶಿವ”
ಜಾತೀಯ ಕಟ್ಟುಪಾಡುಗಳು, ಅಸ್ಪೃಶ್ಯತೆಯನ್ನೊಳಗೊಂಡ ಭ್ರಮೆಯ ಸಮಾಜಕ್ಕೆ ಧಾರ್ಮಿಕ ನೆಲೆಗಟ್ಟಿನ ಮೂಲಕ ಸಾಮಾಜಿಕ ಸುಧಾರಣೆ ,ಶೈಕ್ಷಣಿಕ ಚಳುವಳಿಯ ಹಾದಿಯಲ್ಲಿ ದೀನ ದಲಿತರ ಏಳಿಗೆಗಾಗಿ ಹೊಸ ಅಧ್ಯಾಯವನ್ನು ರೂಪಿಸಿದ “ಬ್ರಹ್ಮಶ್ರೀ ನಾರಾಯಣ ಗುರುಗಳ” ತತ್ವ ಸಂದೇಶ ಸಂದೇಶವನ್ನೊಳಗೊಂಡ *ಶೂದ್ರಶಿವ* ಕನ್ನಡ ನಾಟಕ ಪ್ರಥಮ ಪ್ರದರ್ಶನಕ್ಕೆ ಸಿದ್ಧಗೊಳ್ಳುತ್ತಿದೆ.
ದಿನಾಂಕ 05, ಫೆಬ್ರವರಿ 2023ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮಂಗಳೂರು ಇಲ್ಲಿ ಚೊಚ್ಚಲ ಪ್ರದರ್ಶನ ಕಾಣಲಿದೆ. ಪ್ರತಿಭಾವಂತ ರಂಗ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದ ನಾರಾಯಾಣ ಗುರುಗಳ ಚಳವಳಿ ಆಧಾರಿತ ನಾಟಕ “ಶೂದ್ರ ಶಿವ” ತಿರುಗಾಟಕ್ಕೆ ಸಿದ್ದಗೊಂಡಿದೆ. ಕುತೂಹಲ, ನಿರೀಕ್ಷೆ ಹುಟ್ಟಿಸಿರುವ ಈ ನಾಟಕ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಆಯೋಜಕರಾದ ರುದ್ರ ಥೇಟರ್, ಮಂಗಳೂರು ವಿನಂತಿಸಿದ್ದಾರೆ.




