ಬೆಳಗಾವಿ : ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ದಿನಾಂಕ 01 ಮಾರ್ಚ್ 2025 ಮತ್ತು 02 ಮಾರ್ಚ್ 2025ರಂದು ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ನಾಲ್ಕನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಪರಿಷತ್ತು ರಾಜ್ಯಮಟ್ಟದ ಚುಟುಕು ಕಾವ್ಯಕೃತಿಗಳ ಸ್ಪರ್ಧೆ ಏರ್ಪಡಿಸಿದೆ.
ಸ್ಪರ್ಧೆಯ ವಿವರ : 2022 ಜನವರಿಯಿಂದ 2024 ಡಿಸೆಂಬರ್ ವರೆಗಿನ ಅವಧಿಯಲ್ಲಿ ಪ್ರಕಟಗೊಂಡ ಚುಟುಕು/ಹನಿ ಗವನ ಕೃತಿಗಳಿಗೆ ಮಾತ್ರ ಅವಕಾಶ. ಯಾವುದಾದರೂ ಒಂದು ವರ್ಷದ ಕೃತಿಯ 2 ಪ್ರತಿಗಳನ್ನು ದಿನಾಂಕ 20 ಜನವರಿ 2025ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕು. ವಿಳಾಸ : ಬಸವರಾಜ ಗಾರ್ಗಿ, ಪ್ರಧಾನ ಕಾರ್ಯದರ್ಶಿ, ಹೊಂಗನಸು, 73/ ರಾಣಿ ಚೆನ್ನಮ್ಮ ಹೌಸಿಂಗ್ ಸೊಸೈಟಿ, ಶ್ರೀನಗರ, ಬೆಳಗಾವಿ -590017.