ಧಾರವಾಡ ಬೇಂದ್ರೆಯವರಷ್ಟು ಶ್ರಾವಣವನ್ನು ಕಂಡರಸಿದ ಕವಿ ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಆ ಕಾರಣದಿಂದಲೇ, ಅಡಿಗರು ಬೇಂದ್ರೆಯನ್ನು ಶ್ರಾವಣ ಪ್ರತಿಭೆ ಎಂದದ್ದು. ಬೇಂದ್ರೆಯ ಪಾಲಿಗೆ ಶ್ರಾವಣ ಬರಿ ಮಾಸವಲ್ಲ. ಅದೊಂದು ಋತುವಿಲಾಸ. ಹುಟ್ಟಿನ ಗುಟ್ಟು ಕಂಡುಕೊಂಡ ಅನುಭವ, ಸೋಜಿಗ ಮತ್ತು ಸೌಂದರ್ಯ.
ಶ್ರಾವಣ ಬೇಂದ್ರೆಯವರಿಗೆ ಮೆಚ್ಚಾದ ಬಗೆಗೆ ಅವರ ಮಾತುಗಳಲ್ಲೇ ಹೇಳುವುದಾದರೆ, “ನನ್ನ ಬಾಳುವೆಯದೊಂದು ಶ್ರಾವಣದ ಹಗಲು. ಶ್ರಾವಣ ನನಗೆ ಹೊಸತನವನ್ನು ತರುತ್ತದೆ”.
ಈ ಹೊಸತನ- ಶ್ರಾವಣದ ವೈಭವ, ಶ್ರಾವಣ, ಮತ್ತೆ ಶ್ರಾವಣ, ಮತ್ತೆ ಶ್ರಾವಣಾ ಬಂದ, ಶ್ರಾವಣದ ಹಗಲು, ನಾದಲೀಲೆಯ ಶ್ರಾವಣ, ಹಾಡುಪಾಡಿನ ಶ್ರಾವಣ, ಬಂದಿಕಾರ ಶ್ರಾವಣ, ಪ್ರತಿವರ್ಷದಂತೆ ಬಂತು ಶ್ರಾವಣ ಕವಿತೆಗಳಲ್ಲೂ ಇದೆ.
ಧಾರವಾಡದ ಜಿ. ಬಿ. ಮೆಮೋರಿಯಲ್ ಟ್ರಸ್ಟ್ ನಗರದ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ “ಶ್ರಾವಣದ ಕವಿ ಬೇಂದ್ರೆ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ದಿನಾಂಕ 22 ಆಗಸ್ಟ್ 2025ರ ಶುಕ್ರವಾರದಂದು ಹಮ್ಮಿಕೊಳ್ಳಲು ನಿಶ್ಚಯಿಸಿದೆ.
ಈ ಕಾರ್ಯಕ್ರಮ ಮುಖ್ಯ ಉದ್ದೇಶ ಯುವಕರಿಗಾಗಿ, ಯುವಕರಲ್ಲಿ ಬೇಂದ್ರೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವದು. ಇದರಲ್ಲಿ 15 ರಿಂದ 30 ವರ್ಷದ ಒಳಗಿನ ಯುವಕ- ಯುವತಿಯರಿಗೆ ಪಾಲ್ಗೊಳ್ಳಲು ಅವಕಾಶ. ಅವರು ಬೇಂದ್ರೆ ಕಾವ್ಯ ವಾಚನ ಮಾಡಬಹುದು, ಹಾಡಬಹುದು ಮತ್ತು ಬೇಂದ್ರೆ ಕಾವ್ಯಕ್ಕೆ ಹೆಜ್ಜೆ ಹಾಕಬಹುದು.
ಆಸಕ್ತರು ತಾವು ನೀಡಬೇಕೆಂದಿರುವ ಕಾರ್ಯಕ್ರಮದ ಪರಿಚಯಾತ್ಮಕ ತುಣುಕನ್ನು ತಮ್ಮ ವೈಯಕ್ತಿಕ ವಿವರಗಳೊಂದಿಗೆ ವ್ಹಾಟ್ಸಪ್ ಸಂಖ್ಯೆ-9845447002 ಗೆ ಕಳಿಸಬೇಕು.15 ರಿಂದ 30 ವರ್ಷದೊಳಗಿನ ಯವಕ-ಯುವತಿಯರಿಗೆ ಭಾಗವಹಿಸಲು ಅವಕಾಶವಿದೆ.
1-ಹೆಸರು:
2-ವಯಸ್ಸು:
3-ಲಿಂಗ :
4-ಅಂಚೆ ವಿಳಾಸ:
5-ಮೊಬೈಲ್ ಸಂಖ್ಯೆ:
6-ಶಿಕ್ಷಣ ಸಂಸ್ಥೆಯ ಹೆಸರು:
ಈ ವಿವರಗಳನ್ನು ತಪ್ಪದೇ ನೀಡಿರಿ
ಆಯ್ಕೆಯಾದವರು 22 ಅಗಸ್ಟ್ 2025 ರಂದು ಧಾರವಾಡದ ರಂಗಾಯಣದ ಸಮುಚ್ಚಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವದು. ಭಾಗವಹಿಸುವವರಿಗೆ ಯಾವದೇ ಫೀ ಇರುವುದಿಲ್ಲ. ಭಾಗವಹಿಸಿದ್ದಕ್ಕೆ ಪ್ರಮಾಣ ಪತ್ರ ನೀಡಲಾಗುವದು. ಭಾಗವಹಿಸುವವರು ಸ್ವಂತ ಖರ್ಚಿನಲ್ಲಿ ಬಂದು ಹೋಗಬೇಕು. ಹುಬ್ಬಳ್ಳಿ-ಧಾರವಾಡದವರು ಮಾತ್ರ ಭಾಗವಹಿಸಲು ಅರ್ಹರು.
ಹೆಚ್ಚಿನ ವಿವರಗಳಿಗೆ ಸಮೀರ ಜೋಶಿ – 9845447002, ಕೃಷ್ಣ ಕಟ್ಟಿ – 9448580056
ಶಶಿಧರ ನರೇಂದ್ರ – 9448901846 ಸಂಪರ್ಕಿಸಲು ಕೋರಲಾಗಿದೆ.
Subscribe to Updates
Get the latest creative news from FooBar about art, design and business.
Next Article ಸಾಲಿಗ್ರಾಮದಲ್ಲಿ ನಾಲ್ಕು ಕಥಾಸಂಕಲನಗಳ ಅನಾವರಣ ಕಾರ್ಯಕ್ರಮ