ಶ್ರೀ ಬ್ರಾಹ್ಮರಿ ನಾಟ್ಯಾಲಯ (ರಿ.) ರಜತ ವರ್ಷದ ಸಂಭ್ರಮದಲ್ಲಿದ್ದು ದಿನಾಂಕ 16. 11. 2025 ರಂದು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ಮಧ್ಯಾಹ್ನ 3:00 ಯಿಂದ ಮಾರ್ಗಂ ಭರತನಾಟ್ಯ ಪ್ರಸ್ತುತಿಯನ್ನು ರಜತ ವರ್ಷದ ಅಂಗವಾಗಿ ಹಮ್ಮಿಕೊಂಡಿದೆ. ನವರು ನವಂಬರ್ 2025 ರಿಂದ ಆರಂಭಗೊಂಡು ಪ್ರತಿ ತಿಂಗಳು ಕಾರ್ಯಕ್ರಮ ನೀಡುತ್ತಾ 2027 ಏಪ್ರಿಲ್ ತಿಂಗಳಲ್ಲಿ ರಜತ ವರ್ಷದ ಸಮಾರೋಪ ಕಾರ್ಯಕ್ರಮ ನಡೆಯಲಿದೆ.
ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆಯಿಡುವ ಸಂದರ್ಭದಲ್ಲಿ ನವಂಬರ್ 16ರಂದು ನಡೆಯುವ ಕಾರ್ಯಕ್ರಮದ ನಟುವಾಂಗ ಹಾಗೂ ಹಾಡುಗಾರಿಕೆಯಲ್ಲಿ ವಿದ್ವಾನ್ ಭವಾನಿ ಶಂಕರ್, ಮೃದಂಗದಲ್ಲಿ ಬಿ ಮನೋಹರ್ ರಾವ್ ಮಂಗಳೂರು, ಪಿಟೀಲು ವಾದಕರಾಗಿ ವೈಭವ ಪೈ ಮಣಿಪಾಲ್ ಮತ್ತು ಯೋಗೀಶ್ ಕೊಳಲಗಿರಿ ಇವರ ನಿರೂಪಣೆ ಹಾಗೂ ಶ್ರೀಮತಿ ಸುಹಾಸಿನಿಯವರ ಸಹಕಾರದೊಂದಿಗೆ ನಡೆಯಲಿದೆ.


