ಮಂಗಳೂರು : ಮಂಗಳೂರಿನ ಸಮತಾ ಮಹಿಳಾ ಬಳಗದ ‘ಶ್ರೀ ದೇವಿ ಮಹಿಷ ಮರ್ದಿನಿ’ ಮಹಿಳಾ ಯಕ್ಷಗಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 18 ಫೆಬ್ರವರಿ 2025 ರಂದು ಮಂಗಳೂರಿನ ಜೈಲ್ ರಸ್ತೆ ಯಲ್ಲಿರುವ ‘ಸುಬ್ರಮಣ್ಯ ಸಭಾ’ದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಯಕ್ಷಗಾನ ಕರಾವಳಿಯ ಮಣ್ಣಿನ ಕಲೆ. ಇದರ ಬಗ್ಗೆ ಕೀಳರಿಮೆ ಬಿಟ್ಟು ಆಬಾಲ ವೃದ್ಧರಾಗಿ ಯಕ್ಷಗಾನವನ್ನು ಆರಾಧಿಸುವ ಅನೇಕ ಮಂದಿ ಯಕ್ಷಗಾನ ಪ್ರೇಮಿಗಳಿದ್ದಾರೆ. ಅದರಲ್ಲೂ ಮಹಿಳಾ ತಂಡಗಳು ಪ್ರಾರಂಭಗೊಳ್ಳುವುದರಿಂದ ಈ ಕಲೆಗೆ ಹೆಚ್ಚಿನ ಶಕ್ತಿ ತುಂಬಿದೆ” ಎಂದು ನುಡಿದರು.
‘ಸಮತಾ’ ಇದರ ಗೌರವ ಅಧ್ಯಕ್ಷೆಯಾದ ಶ್ರೀಮತಿ ವಿಜಯಲಕ್ಷ್ಮಿ ಎ. ರಾವ್, ಮಾಜಿ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಆಚಾರ್, ಮಾಜಿ ಅಧ್ಯಕ್ಷೆ ,ಯಕ್ಷ ಮಂಜುಳಾ ಕದ್ರಿ ಮತ್ತು ಮಹಿಳಾ ತಾಳಮದ್ದಳೆ ಬಳಗದ ಅಧ್ಯಕ್ಷೆಯಾದ ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಯಕ್ಷಗಾನ ಅಕಾಡೆಮಿಯ ಸದಸ್ಯ ಶ್ರೀ ರಾಜೇಶ್ ಹೊಸಬೆಟ್ಟು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಖ್ಯಾತ ಕಲಾವಿದ ಶ್ರೀ ರವಿ ಅಲೆವೂರಾಯರು ನಿರ್ದೇಶಿಸಿದ ‘ಶ್ರೀ ದೇವಿ ಮಹಿಷ ಮರ್ದಿನಿ’ ಯಕ್ಷಗಾನದಲ್ಲಿ ಪಾತ್ರದಾರಿಗಳಾಗಿ ಶ್ರೀಮತಿರಾದ ಸುಮನಾ ಮೂರ್ತಿ, ಸುಮತಿ ಶಗ್ರಿತ್ತಾಯ , ವನಿತಾ ಎಲ್ಲೂರು, ಶೈಲಜಾ ಶ್ರೀಕಾಂತ್ ರಾವ್, ಸುಧಾ ವಿ. ರಾವ್, ಜಯಶ್ರೀ ಹೆಬ್ಬಾರ್, ಶೋಭಾ ಸುಬ್ರಮಣ್ಯ ಭಟ್, ದಾಕ್ಷಾಯಿಣಿ ವಿಶ್ವೇಶ್ವರ, ಸುಮಾಪ್ರಸಾದ್, ರೂಪಲಕ್ಷ್ಮೀ ವೈಲಾಯ, ಪೂರ್ಣಿಮಾ ಪ್ರಶಾಂತ್ ಶಾಸ್ತ್ರಿ, , ಅರುಣಾ ಸೋಮಶೇಖರ್, ಪೂರ್ಣಿಮಾ ರಾವ್ ಪೇಜಾವರ, ಗೀತಾ ಪ್ರಸನ್ನ, ಯಶೋದಾ ವೈಲಾಯ, ಭಾಗವಹಿಸಿದ್ದರು. ಇದೇ ಸಂದರ್ಭ ಯಕ್ಷಗಾನ ಗುರು ರವಿ ಅಲೆವೂರಾಯರನ್ನು ‘ಸಮತಾ’ ಬಳಗದಿಂದ ಪುರಸ್ಕರಿಸಲಾಯಿತು.
ಸಮತಾ ಅಧ್ಯಕ್ಷೆ ಸುಧಾ ವಿ. ರಾವ್ ಸ್ವಾಗತಿಸಿ, ಶ್ರೀಮತಿ ಕನಕ ವಲ್ಲಿ ಧನ ಸಹಾಯ ನೀಡಿದವರ ವಿವರವನ್ನಿತ್ತು, ಕಾರ್ಯದರ್ಶಿ ಲೀಲಾ ಕೆ. ಹೊಳ್ಳ ಕಾರ್ಯಕ್ರ ಮ ನಿರೂಪಿಸಿ, ಸುಮನಾ ಪಿ. ರಾವ್ ವಂದಿಸಿದರು.
Subscribe to Updates
Get the latest creative news from FooBar about art, design and business.