ಬೆಂಗಳೂರು : ಕನ್ನಡ ಯುವಜನ ಸಂಘ (ರಿ).ಇವರು ಬೆಂಗಳೂರಿನ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ (ರಿ) ಇದರ ಸಹಕಾರದಲ್ಲಿ ಆಯೋಜಿಸುವ ಪು. ತಿ. ನರಸಿಂಹಾಚಾರ್ ವಿರಚಿತ ‘ಶ್ರೀಹರಿ ಚರಿತೆ’ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 05 ಡಿಸೆಂಬರ್ 2024ರಂದು ಬೆಂಗಳೂರಿನ ಕನ್ನಡ ಯುವಜನ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ. ಮಂಜುಳಾ ಮರಾಠ ವಾಚಿಸಿ ಕರ್ನಾಟಕ ಕಲಾಶ್ರೀ ನಾಗರತ್ನಾ ಮೂರ್ತಿ ವ್ಯಾಖ್ಯಾನ ಗೈಯಲಿದ್ದಾರೆ. ಕನ್ನಡ ಯುವಜನ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ ರೆಡ್ಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುವೆಂಪು ವಿಚಾರ ವೇದಿಕೆ ಇದರ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಎಂ. ಸಿ. ನರೇಂದ್ರ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 98453 18814, 080-2222 1142 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.