ಮೂಲ್ಕಿ : ಮೂಲ್ಕಿ ಬಳಿಯ ಕೆರೆಕಾಡಿನ ಶ್ರೀ ವಿನಾಯಕ ಯಕ್ಷಕಲಾ ಫೌಂಡೇಷನ್ ಇದರ ‘ಶ್ರೀ ವಿನಾಯಕ ಯಕ್ಷಕಲೋತ್ಸವ 2023’ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ದಿನಾಂಕ 11-11-2023ರಂದು ಪದ್ಮಾವತಿ ಲಾನ್ ಎಸ್. ಕೋಡಿಯಲ್ಲಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಡಾ. ವೈ.ಭರತ್ ಶೆಟ್ಟಿ ಇವರು ಮಾತನಾಡುತ್ತಾ “ಸಾಂಸ್ಕೃತಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಸಂಸ್ಥೆಗಳು ಉತ್ತಮ ಸಾಧನೆ ಮಾಡಿವೆ. ಯಕ್ಷಗಾನ ಕಲೆಗೆ ವಿಶ್ವಮನ್ನಣೆ ಇದ್ದು, ದಾನಿಗಳ ಪ್ರೋತ್ಸಾಹ, ಸಹಕಾರ ನಿರಂತವಾಗಿರಬೇಕು” ಎಂದು ಹೇಳಿದರು.
ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀ ಶೈಲೇಂದ್ರ ವೈ. ಸುವರ್ಣ, ಮೆಸ್ಕಾಂನ ಸಹಾಯಕ ಎಂಜಿನಿಯರ್ ಶ್ರೀ ಚಂದ್ರಶೇಖರ ಪೂಜಾರಿ, ಶ್ರೀಮತಿ ಮಾಲತಿ ವಿ.ಅಮೀನ್ ಅವರನ್ನು ಸನ್ಮಾನಿಸಲಾಯಿತು. ಫೌಂಡೇಷನ್ ಅಧ್ಯಕ್ಷ ಜಯಂತ್ ಅಮೀನ್, ನಮೀತಾ ಶ್ಯಾಮ್, ಕೆ.ಭುವನಾಭಿರಾಮ ಉಡುಪ, ಉದ್ಯಮಿಗಳಾದ ಗುರುರಾಜ್ ಎಸ್.ಪೂಜಾರಿ, ಪ್ರಶಾಂತ್ ಪೂಜಾರಿ, ಮಹೇಂದ್ರ, ಧನಂಜಯ ಅಮೀನ್ ಮಟ್ಟು, ಚಿತ್ರಾ ಭಾಸ್ಕರ ಅಮೀನ್, ಸುಪ್ರೀತಾ ಶೆಟ್ಟಿ, ವಾಣಿ, ಅಭಿಜಿತ್ ಕೆರೆಕಾಡು, ಅಜಿತ್ ಕೆರೆಕಾಡು, ಉಷಾ ನರೇಂದ್ರ, ಅರ್ಪಿತಾ ಶೆಟ್ಟಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಅಜಿತ್ ಕೆರೆಕಾಡು ನಿರ್ದೇಶನದಲ್ಲಿ ಪೂರ್ವರಂಗ, ‘ನಂದ ಮುಕುಂದ’ (ಯಕ್ಷ ಪರಂಪರಾ ವೈಭವ), ಕರುಣಾಳು ರಾಘವ (ಯಕ್ಷ ದೃಶ್ಯ-ಕಾವ್ಯ ವೈಭವ), ಸಂಭವಾಮಿ ಯುಗೇ ಯುಗೇ (ಯಕ್ಷ ನೃತ್ಯ ರೂಪಕ) ಮತ್ತು ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ವಾಸುದೇವಃ ಸರ್ವಂ’ ಯಕ್ಷಗಾನ ಪ್ರದರ್ಶನಗೊಂಡಿತು.