ನವದೆಹಲಿ : ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಥಮ ಎಂ.ಎಸ್ಸಿ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರುವ ಶ್ರೇಯ ಕೆ.ಎಚ್.ಗೆ ನವದೆಹಲಿಯ ‘ನವಶ್ರೀ ಕಲೆ ಮತ್ತು ಸಂಸ್ಕೃತಿ ಸಂಸ್ಥೆ’ ನಡೆಸಿದ ರಾಷ್ಟ್ರೀಯ ಮಟ್ಟದ ಕರಕುಶಲ ಸ್ಪರ್ಧೆ ‘ಶಿಲ್ಪ್ ಆಕಾರ್’ನಲ್ಲಿ ಪ್ರಥಮ ಸ್ಥಾನ ದೊರೆತಿದೆ. ಇವರು ಕೆ.ಹರಿಶ್ಚಂದ್ರ ಆಚಾರ್ಯ ಕೋಡಂಬು ಹಾಗೂ ಶುಭ ದಂಪತಿಗಳ ಸುಪುತ್ರಿಯಾಗಿರುತ್ತಾರೆ. ‘ಶಿಲ್ಪ್ ಆಕಾರ್’ ಕಲೆ ಮತ್ತು ಕರಕುಶಲಕ್ಕೆ ಸಂಬಂಧಿಸಿದ ರಾಷ್ಟ್ರಮಟ್ಟದ ಸ್ಪರ್ಧೆಯಾಗಿದೆ. ಇದರಲ್ಲಿ ಭಾಗವಹಿಸುವವರು ತಮ್ಮ ಸೃಜನಶೀಲತೆ ಮತ್ತು ಕಲಾತ್ಮಕ ಕೌಶಲ್ಯಗಳನ್ನು ವಿವಿಧ ಸಾಂಪ್ರದಾಯಿಕ ಅಥವಾ ಸಮಕಾಲೀನ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶಿಸುತ್ತಾರೆ. ಆರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ‘ಡ್ರಾಯಿಂಗ್, ಪೇಂಟಿಂಗ್, ಆರ್ಟ್ ಮತ್ತು ಕ್ರಾಫ್ಟ್’ ಪ್ರದರ್ಶನದಲ್ಲಿ ಅವರ ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಯಿತು. ಅರ್ಟಿಜೆನ್ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ : 21-04-2023ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನವನ್ನು ವಿತರಿಸಲಾಗಿದೆ.