ಕೋಟೇಶ್ವರ: ಯಶಸ್ವಿ ಕಲಾ ವೃಂದ ಕೋಟ ತೆಕ್ಕಟ್ಟೆ ಇದರ ವತಿಯಿಂದ ಶುಭಾಶಯ ಯಕ್ಷಗಾನ ರಂಗ ಪ್ರಸ್ತುತಿಯು ದಿನಾಂಕ 18 ಫೆಬ್ರವರಿ 2025ರಂದು ಬೀಜಾಡಿ ಗಣಪಯ್ಯ ಚಡಗರ ಇವರ ಮನೆಯಂಗಳದ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅನಿರುದ್ಧ ಹಾಗೂ ಸುಪ್ರಿತಾ ದಂಪತಿಗಳನ್ನು ಗೌರವಿಸಿದ ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಮಾತನಾಡಿ “ವರ್ಷವಿಡೀ ಕಲೋಲ್ಲಾಸದಿಂದಲೇ ಪರ್ಯಟನ ನಡೆಸಿ ನೂರೆಂಟು ಕಾರ್ಯಕ್ರಮದ ಸಂಕಲ್ಪ ಪೂರೈಸಿ ಜಯದ ಪತಾಕೆಯನ್ನು ರಾಜ್ಯದಾದ್ಯಂತ ಹಾರಿಸಿದ ಸಂಸ್ಥೆ ಯಶಸ್ವೀ ಕಲಾವೃಂದ. ಕಲಾವಿದನೋರ್ವನ ಮನೆಯಲ್ಲಿ ಕಲಾ ಸಂಸ್ಥೆಗೆ ಅವಕಾಶ ನೀಡಿ ಕಲಾ ಮನಸ್ಸುಗಳಿಗೆ ವೇದಿಕೆ ಕಲ್ಪಿಸಿದ ಗಣಪಯ್ಯ ಚಡಗರ ಮಗನ ಮದುವೆಯಲ್ಲಿ ದೊರೆತ ಅಪೂರ್ವ ಅವಕಾಶ ಯಶಸ್ವೀ ಸಂಸ್ಥೆಗೆ ಸಂದ ಗೌರವ” ಎಂದರು.
ಕಾರ್ಯಕ್ರಮದಲ್ಲಿ ಗಣಪಯ್ಯ ಚಡಗ, ಶ್ರೀಮತಿ ಶಾಲಿನಿ, ಅನಂತ ಮಂಜ, ಶ್ರೀಮತಿ ಸವಿತಾ ಮಂಜ, ಗುರು ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ರಾಹುಲ್ ಕುಂದರ್ ಕೋಡಿ, ಪೂಜಾ ಆಚಾರ್, ಪಂಚಮಿ ವೈದ್ಯ ಉಪಸ್ಥಿತರಿದ್ದರು. ಬಳಿಕ ಶುಭಾಶಯ ಯಕ್ಷಗಾಯನ ಪ್ರಸ್ತುತಿಗೊಂಡಿತು.

