ಕೋಟ: ಯಶಸ್ವೀ ಕಲಾವೃಂದ ರಿ. ಕೊಮೆ-ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದ ಅಂಗವಾದ ‘ಶ್ವೇತಸಂಜೆ-27’ ಕಾರ್ಯಕ್ರಮವು ದಿನಾಂಕ 10-05-2024 ರಂದು ಧಮನಿ ಟ್ರಸ್ಟ್ ತೆಕ್ಕಟ್ಟೆ ಹಾಗೂ ದಿಮ್ಸಾಲ್ ಫಿಲ್ಮ್ಸ್ ಇದರ ಸಹಯೋಗದೊಂದಿಗೆ ಕೋಟದ ಹರ್ತಟ್ಟು ಎಂಬಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕಲಾವಿದ ಹಾಗೂ ಕಲಾ ಪ್ರೋತ್ಸಾಹಕ ಗೋಪಾಲ ಮೈಯ್ಯ ಹರ್ತಟ್ಟು ಮಾತನಾಡಿ “ಕಲಾ ಪ್ರತಿಭೆಗಳ ಜನ್ಮದಾತವಾಗಿರುವ ಸಂಸ್ಥೆ ಯಶಸ್ವೀ ಕಲಾವೃಂದ. ನಿರಂತರ ಸಾಂಸ್ಕೃತಿಕ ತರಗತಿಗಳನ್ನು ನಡೆಸುತ್ತಾ ವಿವಿಧ ಕಲಾ ಪ್ರಕಾರಗಳಲ್ಲಿ ಮಕ್ಕಳನ್ನು ಪಳಗಿಸಿ, ಅವರಿಗೆ ಅವಕಾಶ ನೀಡುತ್ತಾ ಪ್ರತಿಭೆಗಳನ್ನು ಬೆಳೆಸುತ್ತಾ ಸಾಧನೆ ಗೈಯುತ್ತಿರುವುದು ಶ್ಲಾಘನೀಯ ಕಾರ್ಯ. ಭವಿಷ್ಯದ ಕಲಾ ಪ್ರತಿಭೆಗಳಿಗೆ ನಿರಂತರ ವೇದಿಕೆ ಒದಗುತ್ತಿರಬೇಕು. ಈ ನಿಟ್ಟಿನಲ್ಲಿ 25ನೇ ವರ್ಷಾಚರಣೆಯ ಸಂದರ್ಭ ಸಮಾಜದ ಸನ್ಮಿತ್ರರು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ.” ಎಂದರು.
ಮತ್ತೋರ್ವ ಅತಿಥಿ ಗುರು ಲಂಬೋದರ ಹೆಗಡೆ ಮಾತನಾಡಿ “ರಂಗ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸಿಕೊಡುವಲ್ಲಿ ಸಮಾಜದ ಗಣ್ಯರು ಮನಸ್ಸು ಮಾಡಬೇಕು. ಕಲಿಯುವ ಮನಸ್ಸುಗಳಿಗೆ ಅವಕಾಶದ ಪ್ರೋತ್ಸಾಹ ದೊರೆತರೆ ನೂರಾರು ಕಲಾವಿದರು ರಂಗದಲ್ಲಿ ಉಳಿದು ಭವಿಷ್ಯವನ್ನಾಳುವುದರಲ್ಲಿ ಸಂದೇಹವಿಲ್ಲ. ಅದಲ್ಲವಾದರೆ ಪ್ರೇಕ್ಷಕರಾಗಿಯಾದರೂ ಸಾಂಸ್ಕೃತಿಕ ಲೋಕದಲ್ಲಿ ನಿಲ್ಲುತ್ತಾರೆ. ಯಕ್ಷಗಾನವನ್ನು ಶ್ರೀಮಂತಗೊಳಿಸುವಲ್ಲಿ ಪ್ರೇಕ್ಷಕರ ಪಾಲು ದೊಡ್ಡದು.” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ದೇಗುಲದ ಅಧ್ಯಕ್ಷ ವಾಸುದೇವ ಮೈಯ್ಯ, ಚಂದ್ರ ಹರ್ತಟ್ಟು, ಉಪನ್ಯಾಸಕ ಮೋಹನಚಂದ್ರ ಪಂಜಿಗಾರು, ಉದ್ಯಮಿ ಗೋಪಾಲ ಪೂಜಾರಿ ಕುಂದಾಪುರ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಶಸ್ವಿ ಕಲಾವೃಂದದ ಮಕ್ಕಳಿಂದ ‘ದ್ರೌಪದಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಗೊಂಡಿತು.
Subscribe to Updates
Get the latest creative news from FooBar about art, design and business.
Previous Article‘ರಿಕ್ಷಾ ಡೈರಿ’ ಕೃತಿ ಲೋಕಾರ್ಪಣೆ
Next Article ಬೆಳ್ತಂಗಡಿಯಲ್ಲಿ ಮನೆ ಮನೆ ಗಮಕಕ್ಕೆ ಚಾಲನೆ