ಕುಂದಾಪುರ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-80’ ಕಾರ್ಯಕ್ರಮದಡಿಯಲ್ಲಿ ಚಿಣ್ಣರ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 24 ನವೆಂಬರ್ 2024ರಂದು ಕುಂದಾಪುರ ಕೋಡಿಯ ಚಕ್ರಮ್ಮ ದೇಗುಲದಲ್ಲಿ ನಡೆಯಿತು.
ಸಮಾರಂಭದ ಪ್ರಾಯೋಜಕರಾದ ಕೊಡುಗೈ ದಾನಿ ಬಾಂಬೆ ಸೇಫ್ ಕಂಪೆನಿಯ ಮುಖ್ಯಸ್ಥರಾದ ದತ್ತಾನಂದ ಗಂಗೊಳ್ಳಿ ಇವರನ್ನು ಅಭಿನಂದಿಸಿದ ಖ್ಯಾತ ವಕೀಲರಾದ ಎ. ಎಸ್. ಎನ್. ಹೆಬ್ಬಾರ್ ಮಾತನಾಡಿ “ಸಾಂಸ್ಕೃತಿಕ ಕಾರ್ಯಕ್ರಮಗಳು ಗತಕಾಲದಲ್ಲಿ ರಾಜಾಶ್ರಯದಲ್ಲಿ ನೆರವೇರುತ್ತಿತ್ತು. ಹಿಂದೆ ರಾಜರು ನೆರವೇರಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತ ಕಾಲಘಟ್ಟದಲ್ಲಿ ಪ್ರಾಯೋಜಕರು ನೆರವೇರಿಸುತ್ತಿದ್ದಾರೆ. ಇಂದು ಪ್ರಾಯೋಜಕರೇ ರಾಜರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಯಶಸ್ವಿ ಕಲಾವೃಂದದ ಮಕ್ಕಳ ಕಾರ್ಯಕ್ರಮವನ್ನು ದತ್ತಾನಂದ ಗಂಗೊಳ್ಳಿ ಪ್ರಯೋಜನೆ ನೀಡಿ ಅವಕಾಶ ಕೊಟ್ಟು ನಿಜಾರ್ಥದಲ್ಲಿ ರಾಜರಾದರು.” ಎಂದರು.
ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಮಾತನಾಡಿ “ಕಲಾ ಚಟುವಟಿಕೆಗಳು ನಿರಂತರವಾಗಿ ಸಾಗಿ ಬಂದಾಗ ಒಂದಷ್ಟು ಕಲಾವಿದರುಗಳಿಗೆ ಅವಕಾಶ ಕಲ್ಪಿತವಾಗುತ್ತದೆ. ಪ್ರಾಯೋಜಕರ ನೆರವಿನಿಂದ ಸಾಧ್ಯವಾಗುವ ಅವಕಾಶವನ್ನು ಸಂಸ್ಥೆ ಸದಾ ಸ್ಮರಿಸುತ್ತದೆ.” ಎಂದರು. ಸಮಾರಂಭದಲ್ಲಿ ಉದ್ಯಮಿ ಗೋಪಾಲ ಪೂಜಾರಿ, ಸಭಾಭವನದ ಅಧ್ಯಕ್ಷರಾದ ಶಂಕರ ಪೂಜಾರಿ ಕೋಡಿ, ದೇಗುಲದ ಅಧ್ಯಕ್ಷರಾದ ಗೋಪಾಲ ಪೂಜಾರಿ, ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ಚಿಣ್ಣರ ತಾಳಮದ್ದಳೆ ಲಂಕಾದಹನ ಪ್ರಸ್ತುತಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Comments are closed.