ಕುಂದಾಪುರ : ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಶ್ವೇತಯಾನ-39’ನೆಯ ಕಾರ್ಯಕ್ರಮವು ದಿನಾಂಕ 30-06-2024 ರಂದು ಕಲಾಕ್ಷೇತ್ರದಲ್ಲಿರುವ ಪ್ರಕಾಶಾಂಗಣ ಸ್ಟುಡಿಯೋದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿ. ಜೆ. ಪಿ. ಅಧ್ಯಕ್ಷರಾದ ಬಿ. ಕಿಶೋರ್ ಕುಮಾರ್ “ಕುಂದಾಪುರ ಹೃದಯ ಭಾಗದಲ್ಲಿ ಡಿಪ್ಲೊಮೇಟ್ ಹೋಟೇಲ್ ಹತ್ತಿರ ಸಾಹಿತ್ಯ ಚಟುವಟಿಕೆಗಾಗಿ ‘ಪ್ರಕಾಶಾಂಗಣ’ ಎನ್ನುವ ಹೆಸರಿನಲ್ಲಿ ತೆರೆದುಕೊಂಡ ಸ್ಟುಡಿಯೋ, ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಹಾಗೂ ಯಶಸ್ವೀ ಕಲಾವೃಂದದ ಗಾನ ವೈಭವದೊಂದಿಗೆ ಸಂಪನ್ನಗೊಂಡಿದೆ. ಮತ್ತೆ ಮತ್ತೆ ಕೇಳಬೇಕು, ನೋಡಬೇಕು ಎಂದೆನಿಸುವ ಯಕ್ಷಗಾನದ ಪೌರಾಣಿಕ ಆಧಾರಿತ ಪದ್ಯಗಳ ಗಾನ ವೈಭವ ಮಸ್ತಕದಲ್ಲಿ ಉಳಿಯುವಂತಹದ್ದು. ಸಂಸ್ಥೆಯ 25 ವರ್ಷಗಳ ತಪಸ್ಸು ಫಲ ನೀಡುವ ಕಾಲ ಕೂಡಿಬಂದಿದೆ. ಒಂದಷ್ಟು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಬೆಳೆದ ಸಂಸ್ಥೆ ಸಾಕಷ್ಟು ಕಲಾವಿದರನ್ನು ಹೊಂದಿ ಸಮಾಜಕ್ಕೆ ಬೆಳಕಾಗಿದೆ.” ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಹಿರಿಯ ಭಾಗವತರಾದ ರಾಘವೇಂದ್ರ ಮಯ್ಯ ಮಾತನಾಡಿ “ಕಲೆಯು ಕಲಾಭಿಮಾನಿಗಳ ಸಹಕಾರದಿಂದ ಕರಾವಳಿಯ ತಡಿಯಲ್ಲಿ ಭದ್ರವಾಗಿ ಬೇರೂರಿದೆ. ಕಲೆಯು ಚಿಣ್ಣರಿಂದ ಬೆಳಗಬೇಕು. ವಿಶ್ವವ್ಯಾಪಿಯಾಗಿರುವ ಯಕ್ಷಗಾನವನ್ನು ಬಹು ಎತ್ತರಕ್ಕೇರಿಸಿದವರು ಕಲಾಭಿಮಾನಿಗಳು. ವಿದೇಶದಲ್ಲಿ ನೆಲೆಯಾಗಿರುವ ಅನೇಕ ಯಕ್ಷಗಾನಾಸಕ್ತರು ವಿದೇಶಗಳಲ್ಲಿ ಕನ್ನಡ ಸಂಘ ಹಾಗೂ ಇನ್ನಿತರ ಸಂಘಗಳ ಮೂಲಕ ಅಲ್ಲಲ್ಲಿ ಯಕ್ಷಗಾನವನ್ನು ಪ್ರದರ್ಶಿಸಿ ಬೆಳೆಸಿದರು,” ಎಂದರು.
ವೇದಿಕೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಗೋಪಾಲ ಪೂಜಾರಿ, ಕಾರ್ಯದರ್ಶಿ ವೆಂಕಟೇಶ ವೈದ್ಯ, ರಾಹುಲ್ ಕುಂದರ್ ಕೋಡಿ, ಕಿಶನ್ ಪೂಜಾರಿ, ಪವನ್ ಆಚಾರ್, ರಾಹುಲ್ ಅಮೀನ್ ಕೊಮೆ, ಪಂಚಮಿ ವೈದ್ಯ ತೆಕ್ಕಟ್ಟೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಕುಂದಾಪುರದ ಪ್ರಕಾಶಾಂಗಣ ಸ್ಟುಡಿಯೋದಲ್ಲಿ ‘ಶ್ವೇತಯಾನ-39’ನೆಯ ಕಾರ್ಯಕ್ರಮ
Previous Articleಕಾಸರಗೋಡಿನ ರಂಗ ಕಲಾವಿದೆ ಸುಶ್ಮಿತಾ ‘ನೀನಾಸಂ’ ತರಬೇತಿಗೆ ಆಯ್ಕೆ
Next Article ಲೇಖಕಿ ಛಾಯಾ ಶ್ರೀಧರ್ ಇವರ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣೆ