ಸೋಮವಾರಪೇಟೆ : ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ತಾಲ್ಲೂಕು ಘಟಕವು ಕರ್ನಾಟಕ ರಾಜ್ಯೋತ್ಸವ ಮತ್ತು ಸುವರ್ಣ ಸಂಭ್ರಮದ ಅಂಗವಾಗಿ ವಿದ್ಯಾರ್ಥಿಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ಸ್ಪರ್ಧೆಗಳು ದಿನಾಂಕ 22-11-2023ರಂದು ಸೋಮವಾರಪೇಟೆಯ ಮಹಿಳಾ ಸಮಾಜದ ಕಾರ್ಯಾಲಯದಲ್ಲಿ ನಡೆಯಲಿದೆ.
ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆರು ಸ್ಪರ್ಧೆಗಳು ಬೆಳಿಗ್ಗೆ ಘಂಟೆ 10.00 ರಿಂದ ಸಂಜೆ 5.00ರ ವರೆಗೆ ನಡೆಯಲಿದೆ. ಸೋಮವಾರಪೇಟೆ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ರಸ ಪ್ರಶ್ನೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ಡ್ರಾಯಿಂಗ್ ಸ್ಪರ್ಧೆಗೆ ಶೀಟ್ ಮಾತ್ರ ನೀಡಲಾಗುತ್ತದೆ.
ಯು.ಕೆ.ಜಿ.ಯಿಂದ 10 ನೇ ತರಗತಿವರೆಗೆ, ಛದ್ಮವೇಷ ಸ್ಪರ್ಧೆ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಡ್‌ನಲ್ಲಿ ಕಥೆ ಬರೆಯುವ ಸ್ಪರ್ಧೆ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕರಿಗೆ ಕನ್ನಡ ಸಮೂಹ ಗೀತೆ ಮತ್ತು ನೃತ್ಯ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ದಿನಾಂಕ 30-11-2023 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳು ಮತ್ತು ಕನ್ನಡ ಶಿಕ್ಷಕಿಯರನ್ನು ಸನ್ಮಾನಿಸಲಾಗುವುದು ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ಡಿ.ವಿಜೇತ್ ತಿಳಿಸಿದ್ದಾರೆ.
ಹೆಸರು ನೋಂದಾಯಿಸಲು ಸಂಪರ್ಕ ಸಂಖ್ಯೆ 9845005453, 8861550444
Subscribe to Updates
Get the latest creative news from FooBar about art, design and business.
ಕಸಾಪ ಸೋಮವಾರಪೇಟೆ ಘಟಕದಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಸುವರ್ಣ ಸಂಭ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳು | ನವಂಬರ್ 22ರಂದು
No Comments1 Min Read
Previous Articleಮಂಗಳೂರಿನ ಕನ್ನಡ ಕಟ್ಟೆಯ ವಿಂಶತಿ ಆಚರಣೆ