ವಿಟ್ಲ : ನಾಟ್ಯ ವಿದ್ಯಾನಿಲಯ ಕುಂಬಳೆ ಇದರ ನೃತ್ಯಗುರುಗಳಾದ ವಿದುಷಿ ಡಾ. ವಿದ್ಯಾಲಕ್ಷ್ಮೀ ಇವರ ಶಿಷ್ಯೆ ವಿದುಷಿ ಸಿಂಚನ ಲಕ್ಷ್ಮೀ ಕೋಡಂದೂರು ಇವರ ಭರತನಾಟ್ಯ ರಂಗಪ್ರವೇಶದ ಸಮಾರಂಭವು ದಿನಾಂಕ 24 ಏಪ್ರಿಲ್ 2025ರ ಗುರುವಾರದಂದು ವಿಟ್ಲ ಗಾರ್ಡನ್ ಆಡಿಟೋರಿಯಂ ಇಲ್ಲಿ ನಡೆಯಿತು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಾಟ್ಯಾಂಜಲಿ ಕಲಾ ಅಕಾಡೆಮಿ ಸುರತ್ಕಲ್ ಇದರ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ.ಚಂದ್ರಶೇಖರ ನಾವಡ ಮಾತನಾಡಿ “ಸಂಗೀತ ಹಾಗೂ ನೃತ್ಯ ಏಕಕಾಲಕ್ಕೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ ನಾಟ್ಯವಿದ್ಯಾನಿಲಯದ ಸಿಂಚನ ಅದೆಲ್ಲವನ್ನೂ ಮೀರಿದ ಸಾಧನೆಯನ್ನು ಮಾಡಿ ರಂಗಪ್ರವೇಶವನ್ನು ಮಾಡಿದ್ದಾಳೆ. ರಂಗಪ್ರವೇಶವು ನಿಂತ ನೀರಾಗದೆ ನಾದವು ನಿರಂತರ ಹರಿಯುತ್ತಿರಬೇಕು. ಭರತನಾಟ್ಯವೆಂಬ ಕಲೆಯ ಮೂಲಕ ಅನೇಕ ಶಿಷ್ಯಂದಿರನ್ನು ಬೆಳಕಿಗೆ ತಂದ ಡಾ. ವಿದ್ಯಾಲಕ್ಷ್ಮೀ ಅವರು ಜನಮೆಚ್ಚುವ ಸಾಧನೆಯನ್ನು ಮಾಡಿದ್ದಾರೆ. ಸಿಂಚನಲಕ್ಷ್ಮೀಯಂತಹ ಅನೇಕ ಪ್ರತಿಭೆಗಳನ್ನು ನೀಡಿ ಕಲೆಯ ಮೇಲಿನ ಪ್ರೀತಿಯನ್ನು ಅವರು ತೋರ್ಪಡಿಸಿದ್ದಾರೆ” ಎಂದರು.
ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಪ್ರದರ್ಶನ ನೀಡಿದ ವಿದುಷಿ ಸಿಂಚನ ಲಕ್ಷ್ಮೀ ಕೋಡಂದೂರು ಪುಷ್ಪಾಂಜಲಿ ಮತ್ತು ಗಜವದನ -ಶ್ರೀ ರಂಜಿನಿ ರಾಗ-ಆದಿ ತಾಳ-ಪಾಪನಾಶ ಶಿವಂ (ರಚನೆ). ಜತಿಸ್ವರ-ರಸಿಕಪ್ರಿಯ ರಾಗ-ಆದಿ ತಾಳ-ಲಾಲ್ಗುಡಿ ಜಯರಾಮನ್ ಶಬ್ದಂ-ರಾಗಮಾಲಿಕೆ-ಮಿಶ್ರ ಛಾಪು-ರಾಮಯ್ಯ ಪಿಳ್ಳೈ, ಪದವರ್ಣ(ಮಾತೆ ಮಲಯಧ್ವಜ) -ಖಮಚ್ ರಾಗ-ಆದಿ ತಾಳ-ಮುತ್ತಯ್ಯ ಭಾಗವತರ್, ಕೃತಿ(ಉಮಾಮಹೇಶ್ವರಿ)-ರೇವತಿ ರಾಗ-ಆದಿ ತಾಳ-ಆಲತ್ತೂರು ವಿಜಯ ಕುಮಾರ್, ಪದಮ್ (ಅಲೈಪಾಯುದೇ)-ಕಾನದ ರಾಗ-ಆದಿ ತಾಳ-ಉತ್ತುಕಾಡು ವೆಂಕಟ ಸುಬ್ಬಯ್ಯರ್, ದೇವರನಾಮ(ಹರಿಸ್ಮರಣೆ)-ಯಮನ ಕಲ್ಯಾಣಿ-ಆದಿ ತಾಳ-ಪುರಂದರ ದಾಸರು, ತಿಲ್ಲಾನ – ರಾಗಮಾಲಿಕೆ-ಆದಿ ತಾಳ-ದಂಡಾಯುಧ ಪಾಣಿ ಪಿಳ್ಳೈಮಂಗಳದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.