ಮಂಗಳೂರು : ಡಾ. ವಾಮನ ನಂದಾವರ ಅವರ ಬಹುಮಾನಿತ ಕೃತಿಯ ಮೂರನೇ ಮುದ್ರಣ ‘ಸಿಂಗ ದನ’ ಬಿಡುಗಡೆ ಸಮಾರಂಭವು ದಿನಾಂಕ 05-08-2023 ಶನಿವಾರ ಮಧ್ಯಾಹ್ನ 3.30 ಗಂಟೆಗೆ ಬಳ್ಳಾಲ್ಬಾಗ್, ಪತ್ತು ಮುಡಿ ಸೌಧದಲ್ಲಿ ನಡೆಯಲಿದೆ.
ಮೈಸೂರು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನದ ನಿಕಟ ಪೂರ್ವ ಯೋಜನಾ ನಿರ್ದೇಶಕರಾದ ಡಾ. ಬಿ. ಶಿವರಾಮ ಶೆಟ್ಟಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಪುಸ್ತಕ ಬಿಡುಗಡೆಯನ್ನು ಮಾಡಲಿದ್ದಾರೆ. ಡಾ. ವಾಮನ ನಂದಾವರ ಇವರ ಉಪಸ್ಥಿತಿಯಲ್ಲಿ ಶ್ರೀ ಮೌನೇಶ್ ಕುಮಾರ್ ಛಾವಣಿ ಮತ್ತು ಬಳಗದವರಿಂದ ವಚನ, ದಾಸ ಸಾಹಿತ್ಯ ಗಾಯನ ನಡೆಯಲಿದೆ.
ಹೇಮಾಂಶು ಪ್ರಕಾಶನದ ಚಂದ್ರಕಲಾ ನಂದಾವರ ಮತ್ತು ಡಾ. ವಾಮನ ನಂದಾವರ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ಸ್ ಕಲ್ಲೂರು ನಾಗೇಶ ಎಲ್ಲರಿಗೂ ಪ್ರೀತಿಯ ಸ್ವಾಗತ ಕೋರಿದ್ದಾರೆ.