ಸುಳ್ಯ : ಜಲಶ್ರೀ ಪ್ರತಿಷ್ಠಾನ ಕಡ್ಲಾರು ದೇವಚಳ್ಳ ಗ್ರಾಮ ಸುಳ್ಯ ತಾಲೂಕು ಮತ್ತು ಎನ್.ಎ. ಟೈಮ್ಸ್ ಯೂಟ್ಯೂಬ್ ಚಾನೆಲ್ ಇವುಗಳ ಆಶ್ರಯದಲ್ಲಿ ‘ಗೀತಗಾಯನ ವೀಡಿಯೋ ಸ್ಪರ್ಧೆ 2024’ ಆಯೋಜಿಸಲಾಗಿದೆ.
ನಿಯಮಗಳು :
* ಕನ್ನಡ ಭಾಷೆಯ ಭಾವಗೀತೆ, ಭಕ್ತಿಗೀತೆ, ಜನಪದ ಗೀತೆ, ಲಾವಣೆ ಹಾಡು, ಕೀರ್ತನೆಗಳು ಇದರಲ್ಲಿ ಯಾವುದಾದರೂ ಒಂದನ್ನು ಹಾಡುತ್ತಿರುವ ವಿಡಿಯೋ ಮಾಡಿ ಕಳಿಸಬೇಕು.
* ನಿಮ್ಮ ವಿಡಿಯೋಗಳು ನಾಲ್ಕು ನಿಮಿಷ ಮೀರಬಾರದು; 12ರಿಂದ 50 ವರ್ಷದೊಳಗಿನ ಸ್ಪರ್ಧಿಗಳು ಭಾಗವಹಿಸಬಹುದು.
* ಎಲೆಕ್ಟ್ರಾನಿಕ್ ಸಂಗೀತ ಉಪಕರಣ ಅಥವಾ ಕರೋಕೆಯನ್ನಾಗಲಿ ಅಭ್ಯರ್ಥಿಯು ಹಾಡಿನ ರೆಕಾರ್ಡ್ ಗಳಲ್ಲಿ ಬಳಸುವಂತಿಲ್ಲ.
* ಹಾಡಿನ ಸಮಯದಲ್ಲಿ ತಾಳ, ತಮ್ಕಿ ಮತ್ತು ಶೃತಿ ಪೆಟ್ಟಿಗೆಯನ್ನು ಬಳಸಬಹುದು. ಆದರೆ ಕಡ್ಡಾಯವಿಲ್ಲ.
* ಹಾಡಿನ ರೆಕಾರ್ಡಿಂಗ್ ಮಾಡುವಾಗ ಪ್ರಶಾಂತತೆ ಮತ್ತು ಸ್ಪಷ್ಟವಾಗಿರಲಿ ಮತ್ತು ಯಾವುದೇ ಸಹಹಾಡುಗಾರರು ಹಾಡುವಂತಿಲ್ಲ.
* ಹಾಡಿನ ಪ್ರಾರಂಭಕ್ಕೆ ಮೊದಲು ಗೀತ ಗಾಯನ ಸ್ಪರ್ಧೆಗಾಗಿ ಎಂದು ಉಲ್ಲೇಖಿಸಿ, ನಿಮ್ಮ ಹೆಸರು, ಊರು, ವಿಳಾಸಗಳನ್ನು ತಿಳಿಸಬೇಕು.
* ಹಾಡಿನ ರೆಕಾರ್ಡಿಂಗ್ ಮಾಡುವಾಗ ಮೊಬೈಲನ್ನು ಲ್ಯಾಂಡ್ ಸ್ಕೇಪ್ ಮಾದರಿಯಲ್ಲಿ ಚಿತ್ರಣ ಮಾಡತಕ್ಕದ್ದು.
* ಚಿತ್ರೀಕರಿಸಿದ ಹಾಡಿನ ವಿಡಿಯೋದಲ್ಲಿ ಪ್ರಾರಂಭ ಮತ್ತು ಅಂತ್ಯವನ್ನು ಹೊರತುಪಡಿಸಿ, ಹಾಡಿನ ಮಧ್ಯಭಾಗದಲ್ಲಿ ಯಾವುದೇ ಕಾರಣಕ್ಕೂ ಸಂಕಲನ ಮಾಡುವಂತಿಲ್ಲ.
* ನೀವು ಸ್ಪರ್ಧೆಗಾಗಿ ಚಿತ್ರೀಕರಿಸಿದ ವಿಡಿಯೋವನ್ನು ಬೇರೆ ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವಂತಿಲ್ಲ.
* ಸ್ಪರ್ಧೆಯಲ್ಲಿ ಭಾಗವಹಿಸಿದ ವಿಡಿಯೋಗಳನ್ನು 50% ತೀರ್ಪುಗಾರರ ಮತ್ತು 50% ಯೂಟ್ಯೂಬ್ ವೀವ್ಸ್ ಇದರ ಮೂಲಕ ಆಯ್ಕೆ ಮಾಡಲಾಗುವುದು.
ನಿಮ್ಮ ವಿಡಿಯೋಗಳನ್ನು ಕಳುಹಿಸಿ ಕೊಡಬೇಕಾದ ಕೊನೆಯ ದಿನಾಂಕ 15-07-2024. ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, ಪ್ರಥಮ ಬಹುಮಾನ ₹ 2,500 ಮತ್ತು ಪ್ರಶಸ್ತಿ ಪತ್ರ ಹಾಗೂ ದ್ವಿತೀಯ ಬಹುಮಾನ ₹ 2,000 ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ನಿಮ್ಮ ವಿಡಿಯೋಗಳನ್ನು ಕಳುಹಿಸಿಕೊಡಬೇಕಾದ ವಾಟ್ಸಪ್ ನಂಬರ್ : +91 91418 40733 ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 72599 28731. ಗೀತಗಾಯನ ವೀಡಿಯೋ ಸ್ಪರ್ಧೆಯ ವಿಜೇಶ ಮತ್ತು ಮೆಚ್ಚುಗೆ ಗಳಿಸಿದ ಹಾಡುಗಾರರಿಗೆ ನಮ್ಮ ಮುಂದಿನ ಸಂಗೀತ ನಿರ್ಮಾಣ ಪ್ರಾಜೆಕ್ಟ್ ಗಳಲ್ಲಿ ಹಿನ್ನಲೆ ಹಾಡುಗಾರರಾಗುವ ಅವಕಾಶ ನೀಡಲಾಗುವುದು.