ಮಂಗಳೂರು : ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಇದರ ಪದಗ್ರಹಣ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ದಿನಾಂಕ 30-09-2023ರಂದು ಜರಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುವೆರೆ ಆಯನೊ ಕೂಟದ ಅಧ್ಯಕ್ಷರಾದ ಶ್ರೀಮತಿ ಶಮಿನ ಆಳ್ವ ಇವರು ವಹಿಸಲಿದ್ದಾರೆ. ವಿಧಾನ ಸಭಾ ಅಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಇವರು ಉದಾಟಿಸಲಿದ್ದು, ಕಟೀಲು ದೇವಾಲಯದ ಶ್ರೀ ಹರಿನಾರಾಯಣ ಆಸ್ರಣ್ಣ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಇದೇ ವೇದಿಕೆಯಲ್ಲಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಶ್ರೀ ರಮಾನಾಥ ರೈ ಮತ್ತು ಜಾಗತಿಕ ಬಂಟ್ಸ್ ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ಇವರುಗಳು ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರಿಗೆ ‘ತುಳುವೆರೆ ಕರ್ಣೆ’ ಬಿರುದು ಪ್ರದಾನ ಮಾಡಲಿರುವರು. ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಇವರಿಂದ ದೇವದಾಸ್ ಈಶ್ವರಮಂಗಲ ಇವರು ಅನುವಾದ ಮಾಡಿದ ‘ಸಿರಿದೇವಿ ಮಾತ್ಮೆ’ ಎಂಬ ಕೃತಿಯು ಲೋಕಾರ್ಪಣೆಯಾಗಲಿದೆ.
ಮಧ್ಯಾಹ್ನ ಗಂಟೆ 2ಕ್ಕೆ ವಾಯ್ಸ್ ಓಫ್ ಆರಾಧನಾ ಕೂಟ ಇವರಿಂದ ‘ಜೋಕ್ಲೆನ ಮಿನದನ’ ಮತ್ತು ಫ್ಲೆವಿ ಡಿ. ಮೆಲ್ಲೊ, ಸರೋಜ, ಹರೀಶ್ ಮತ್ತು ತಂಡದವರಿಂದ ‘ತುಳು ಜಾನಪದ ನೃತ್ಯ ಮತ್ತು ಹಾಡು’ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 4ಕ್ಕೆ ಯಕ್ಷಗಾನ ರಂಗದಲ್ಲಿಯೇ ಪ್ರಪ್ರಥಮ ಬಾರಿಗೆ ತುಳು ಭಾಗವತಿಕೆ ಸಹಿತ ಯಕ್ಷಲೋಕದ ನಾಮಾಂಕಿತ ಕಲಾವಿದರ ಸಮಾಗಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸರಪಾಡಿ ಅಶೋಕ್ ಶೆಟ್ಟಿ ಇವರ ಸಂಯೋಜನೆಯಲ್ಲಿ ‘ಸಿರಿ ದೇವಿ ಮೈಮೆ’ ತುಳು ಯಕ್ಷಗಾನ ಪ್ರದರ್ಶನವು ನಡೆಯಲಿದೆ.