ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜೈಕರ್ನಾಟಕ ಸಂಘ ಬೆಳ್ಳೇಕೆರೆ (ರಿ.) ಇದರ ವತಿಯಿಂದ ‘ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ’ ಹಾಗೂ ‘ಅಮೃತ ಕಾವ್ಯ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 08 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ರಕ್ಷಿದಿಯ ಪೂರ್ಣ ಚಂದ್ರ ತೇಜಸ್ವಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕ್ಯಾಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚಿನ್ ಎನ್.ಜಿ. ಇವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಕವಿತಾ ಸುಬ್ಬಯ್ಯ ಮತ್ತು ರಾಧೆ ರಕ್ಷಿದಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ‘ಎಸ್.ಕೆ. ಕರೀಂಖಾನ್ ಸೌಹಾರ್ದ ಪ್ರಶಸ್ತಿ’ಯನ್ನು ಬಿ. ಪರಶುರಾಮ್ ಇವರಿಗೆ ಹಾಗೂ ‘ಅಮೃತ ಕಾವ್ಯ ಪ್ರಶಸ್ತಿ’ಯನ್ನು ಸಂಘಮಿತ್ರೆ ನಾಗರಘಟ್ಟ ಮತ್ತು ವಿಶಾಲ್ ಮಾಸ್ಟರ್ ಇವರುಗಳಿಗೆ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀಮತಿ ರತ್ನ ಸಕಲೇಶಪುರ, ನರಸಿಂಹ ಮೂರ್ತಿ ಚಾಮರಾಜನಗರ, ಕಲಾಪ್ರಿಯ ಮಂಜು ಸಕಲೇಶಪುರ ಇವರುಗಳಿಂದ ಆನಂದ ನಾದಸಂಗಮ ಬಳಗ ಜೊತೆಗೂಡಿ ಜಾನಪದ ಮತ್ತು ರಂಗಗೀತೆಗಳ ಕಾರ್ಯಕ್ರಮ ನಡೆಯಲಿದೆ.