ಧಾರವಾಡ : ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಮೆಮೋರಿಯಲ್ ಫೌಂಡೇಷನ್ ಟ್ರಸ್ಟ್ ಬೆಂಗಳೂರು ಮತ್ತು ಭಾರತೀಯ ಸಂಗೀತ್ ವಿದ್ಯಾಲಯ ಧಾರವಾಡ ಇವರು ಪ್ರಸ್ತುತ ಪಡಿಸುವ ‘ಸ್ಮರಣೆ’ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸಂಗೀತೋತ್ಸವ -2025 ಕಾರ್ಯಕ್ರಮವನ್ನು ದಿನಾಂಕ 14 ಸೆಪ್ಟೆಂಬರ್ 2025ರಂದು ಧಾರವಾಡದ ಸೃಜನ ಅಣ್ಣಾಜಿ ರಾವ್ ಶೀರೂರ್ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ‘ಇನ್ಫೋಸಿಸ್ ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮಾರಕ ಪ್ರಶಸ್ತಿ -2025’ ಮತ್ತು ‘ಉಸ್ತಾದ್ ಬಾಲೇಖಾನ್ ಸ್ಮಾರಕ ಪಕ್ಕವಾದ್ಯ ಪ್ರಶಸ್ತಿ -2025’ ಪ್ರದಾನ ಮಾಡಲಾಗುವುದು. ಸಿತಾರ್ ರತ್ನ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಆಯಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.