Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಇವರು ‘ಸರಸ್ವತಿ ಪ್ರಭಾ ಪುರಸ್ಕಾರ -2024’ಕ್ಕೆ ಆಯ್ಕೆ
    Awards

    ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಇವರು ‘ಸರಸ್ವತಿ ಪ್ರಭಾ ಪುರಸ್ಕಾರ -2024’ಕ್ಕೆ ಆಯ್ಕೆ

    May 9, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹುಬ್ಬಳ್ಳಿ : ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಲೋಕವೇದ ಇತ್ಯಾದಿ ಕ್ಷೇತ್ರಕ್ಕೆ ಹಾಗೂ ತಮ್ಮ ಸುತ್ತಲ ಸಮಾಜಕ್ಕೆ ಅಪಾರ ದೇಣಿಗೆ, ಸೇವೆ ನೀಡಿಯೂ ಕೊಂಕಣಿ ಭಾಷಾ ಸಮೂಹದಿಂದ ಗುರುತಿಸಲ್ಪಡದ ಅಪಾರ ಸಾಧಕರು ನಮ್ಮ ನಡುವೆ ಇದ್ದಾರೆ. ಅವರು ಕೊಂಕಣಿ ಭಾಷೆಗೆ 30ರಿಂದ 50 ವರ್ಷಗಳ ಕಾಲ ಗಮನಾರ್ಹ ಸೇವೆಯನ್ನು ಸಲ್ಲಿಸಿದ್ದಾರೆ. ಆದರೂ ನಾನಾ ಕಾರಣಗಳಿಂದ ಅವರು ಯಾವುದೇ ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾಗಿದ್ದಾರೆ. ಕರ್ನಾಟಕದಲ್ಲಿರುವ ಇಂಥಹ ಕೊಂಕಣಿ ಸಾಧಕರನ್ನು ಗುರುತಿಸಿ ಗೌರವಿಸಬೇಕೆನ್ನುವ ಉದ್ದೇಶದಿಂದ ಹುಬ್ಬಳ್ಳಿಯಿಂದ ನಿಯಮಿತವಾಗಿ ಪ್ರಕಟಗೊಳ್ಳುತ್ತಾ ಇದೀಗ ಪ್ರಕಟಣೆಯ 35 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ನಿಯಮಿತ ಪ್ರಕಟಣೆಯ 36ನೇ ವರ್ಷಕ್ಕೆ ಪಾದಾರ್ಪಣೆಗೊಂಡಿರುವ ‘ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆ’ಯು 2022ರಿಂದ ವಯೋವೃದ್ಧ ಕೊಂಕಣಿ ಭಾಷಾ ಸಾಧಕರನ್ನು ಆಯ್ಕೆ ಮಾಡಿ ‘ಸರಸ್ವತಿ ಪ್ರಭಾ ಪುರಸ್ಕಾರ’ವನ್ನು ನೀಡುತ್ತಾ ಬಂದಿದೆ. 2024ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಕುಂದಾಪುರದ 75 ವರ್ಷ ಪ್ರಾಯದ, ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಅವರನ್ನು ಆಯ್ಕೆ ಮಾಡಲಾಗಿದೆ.

    ಕೊಂಕಣಿ ಲೇಖನ, ಸಂಗೀತ, ನಾಟಕ ರಚನೆ ಮತ್ತು ನಿರ್ದೇಶನ, ಜಾನಪದ ಸಾಹಿತ್ಯಗಳ ಸಂಗ್ರಹದೊಂದಿಗೆ ಕೊಂಕಣಿಯಲ್ಲಿ ಉಪನ್ಯಾಸ, ಭಜನೆ, ಕುಂದಾಪುರ ಪರಿಸರದಲ್ಲಿ ಹಲವಾರು ಕೊಂಕಣಿ ಹಾಗೂ ಇತರ ಸಂಘಟನೆಗಳನ್ನು ಕಟ್ಟಿ ಸಮಾಜ ಸೇವೆ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಕೈಯಾಡಿಸಿ ಗುರುತಿಸಿಕೊಂಡಿರುವ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ಕಾಮತ್ ಅವರು ಸತತ ಕಳೆದ ಐದು ದಶಕಗಳಿಗಿಂತ ಅಧಿಕ ಸಮಯದಿಂದ ಕೊಂಕಣಿ-ಕನ್ನಡ ಭಾಷೆಗಳೆರಡಕ್ಕೂ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ.

    ಅವರ ಹಲವಾರು ಕೊಂಕಣಿ ಕೃತಿಗಳು ಪ್ರಕಟಗೊಂಡಿವೆ. ಅವರು ಸಂಘ-ಸಂಸ್ಥೆಗಳನ್ನೂ ಕಟ್ಟಿ ಪ್ರತಿಭಾ ಪುರಸ್ಕಾರ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಪಾರಂಪರಿಕ ಕಲೆ, ಸಂಸ್ಕೃತಿ, ಆಹಾರ, ಸಂಸ್ಕಾರ, ಸಂಸ್ಕೃತಿಗಳ ರಕ್ಷಣೆಗೆ ಸಹಕಾರಿಯಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಹಲವಾರು ಸಮಾವೇಶ, ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸಿದ್ದಾರೆ. ನಾಡಿನ ಹಲವಾರು ಕೊಂಕಣಿ, ಕನ್ನಡ ಪತ್ರಿಕೆಗಳಲ್ಲಿ ಇವರ ಲೇಖನ, ಕವನಗಳು ಪ್ರಕಟಗೊಂಡಿವೆ.

    ಸರಸ್ವತಿ ಪ್ರಭಾ ಪುರಸ್ಕಾರ – 2023ಕ್ಕೆ ಆಯ್ಕೆಯಾದ ಶ್ರೀಮತಿ ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಇವರಿಗೆ ಸರಸ್ವತಿ ಪ್ರಭಾ ಪತ್ರಿಕೆಯ ವತಿಯಿಂದ ಶಾಲು, ಸ್ಮರಣಿಕೆ, ಹಾರ, ಸನ್ಮಾನ ಪತ್ರ, ಫಲತಾಂಬೂಲ ಹಾಗೂ ರೂ.5,001/- ನಗದು ಹಣದೊಂದಿಗೆ ಸದ್ಯದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸರಸ್ವತಿ ಪ್ರಭಾ ಪತ್ರಿಕೆಯ ಸಂಪಾದಕರಾದ ಆರಗೋಡು ಸುರೇಶ ಶೆಣೈಯವರು ತಿಳಿಸಿದ್ದಾರೆ.

    ಕಳೆದ 2022ರ ಸಾಲಿನಲ್ಲಿ 25ಕ್ಕಿಂತ ಅಧಿಕ ಸಾಹಿತ್ಯ ಕೃತಿಗಳನ್ನು ಬರೆದ (ಅವುಗಳಲ್ಲಿ 6 ಕೊಂಕಣಿ ಕೃತಿಗಳು) ಬೆಂಗಳೂರಿನ ಕೊಂಕಣಿ ಸಹಿತ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಸೇರಿ ಚತುರ್ಭಾಷಾ ಸಾಹಿತಿ 80ಕ್ಕಿಂತ ಅಧಿಕ ವಯಸ್ಸಾದ ವಯೋವೃದ್ಧ ಡಾ. ಮೋಹನ ಜಿ. ಶೆಣೈ ಮತ್ತು ಕೊಂಕಣಿ ಸಾಹಿತ್ಯ ಹಾಗೂ ರಂಗಕಲೆಗೆ ಅಪಾರ ಸೇವೆ ಸಲ್ಲಿಸಿ, ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ 30ಕ್ಕಿಂತ ಅಧಿಕ ನಾಟಕಗಳನ್ನು ಬರೆದ 75 ವರ್ಷ ವಯಸ್ಸಿನ ಶಿರಸಿಯ ಶ್ರೀ ಅನಿಲ ಪೈ ಇವರಿಗೆ, 2023ನೇ ಸಾಲಿನಲ್ಲಿ ಕೊಂಕಣಿಯ ಹೆಸರಾಂತ ಬರಹಗಾರ್ತಿ, ಕೊಂಕಣಿ ಜಾನಪದ ಸಾಹಿತ್ಯ ರಕ್ಷಕಿಯಾದ 8 ಕೊಂಕಣಿ ಕೃತಿಗಳನ್ನು ಪ್ರಕಟಿಸಿರುವ 77 ವರ್ಷ ವಯಸ್ಸಿನ ಶಿರಸಿಯ ಶ್ರೀಮತಿ ಜಯಶ್ರೀ ನಾಯಕ ಎಕ್ಕಂಬಿ ಇವರಿಗೆ ಸರಸ್ವತಿ ಪ್ರಭಾ ಪುರಸ್ಕಾರವನ್ನು ಪ್ರದಾನ ಮಾಡಿರುತ್ತದೆ.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ತಾಲೂಕು ಘಟಕದ ‘ಪ್ರಥಮ ವಾರ್ಷಿಕೋತ್ಸವ’
    Next Article ಅರೆಹೊಳೆಯಲ್ಲಿ ‘ಋತುಮಾನ’ ಕಾರ್ಯಾಗಾರದ ಸಮಾರೋಪ ಮತ್ತು ನೃತ್ಯವರ್ಷ 2024 | ಮೇ 10
    roovari

    Add Comment Cancel Reply


    Related Posts

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025

    ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ದತ್ತಿನಿಧಿ ಕಾರ್ಯಕ್ರಮ | ಮೇ 31

    May 28, 2025

    ಉತ್ತರ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಪ್ರಕಟ

    May 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.