ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಮತ್ತು ಕರ್ಣಾಟಕ ಯಕ್ಷಧಾಮ ಮಂಗಳೂರು ಇದರ ವತಿಯಿಂದ ಕನಕ ಜಯಂತಿ ಪ್ರಯುಕ್ತ ಏಕವ್ಯಕ್ತಿ ನಾಟಕ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 08 ನವೆಂಬರ್ 2025ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಕಲಾವಿದ ಯಕ್ಷಚಂದ್ರಿಕೆ ಶಶಿಕಾಂತ ಶೆಟ್ಟಿ ಕಾರ್ಕಳ ಇವರ ನೂತನ ಏಕವ್ಯಕ್ತಿ ನಾಟಕ ‘ಸ್ತ್ರೀ ಗೃಹಂ ರಕ್ಷತಿ’ ರಂಗ ಪ್ರದರ್ಶನ ಹಾಗೂ ಕುಂದಾಪುರ ಹಾಲಾಡಿಯ ಮಯ್ಯ ಯಕ್ಷಬಳಗ ಟ್ರಸ್ಟ್ ಇವರಿಂದ ‘ಶರಸೇತು ಬಂಧನ’ ಪೌರಾಣಿಕ ಪ್ರಸಂಗಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

