ಬೆಳಗಾವಿ : ರಂಗಶಂಕರ ಬೆಂಗಳೂರಿನ ಒಂದು ವಿಶೇಷ ವಿಭಿನ್ನ ರೀತಿಯ ರಂಗಯೋಜನೆಗೆ ನಮ್ಮ ಹೆಮ್ಮೆಯ ರಂಗಸಂಪದ ಬೆಳಗಾವಿಯ ತಂಡ ಆಯ್ಕೆಯಾಗಿದೆ ಎಂಬುದು ಅಭಿಮಾನದ ಸಂಗತಿ. ಇದರ ಅಡಿಯಲ್ಲಿ ಎನ್.ಎಸ್.ಡಿ. ಪದವೀಧರೆ ಸವಿತಾ ಬೈರಪ್ಪ ಇವರು ಎಸ್. ಸಂಧ್ಯಾರವರ ‘ನಕ್ಷತ್ರ ಯಾತ್ರಿಕರು’ ಎಂಬ ನಾಟಕವನ್ನು ನಿರ್ದೇಶಿಸಿ ರಂಗಸಂಪದ ಬೆಳಗಾವಿಯ ತಂಡಕ್ಕೆ ತಯಾರಿಸುತ್ತಿದ್ದಾರೆ. ಇದರ ತಾಲೀಮು ದಿನಾಂಕ 28 ಸೆಪ್ಟೆಂಬರ್ 2025ರಿಂದ ಪ್ರಾರಂಭವಾಗುವದು. ಇದರ ಮೊದಲ ಪ್ರದರ್ಶನ ದಿನಾಂಕ 02 ನವೆಂಬರ್ 2025ರಂದು ಬೆಳಗಾವಿಯಲ್ಲಿ ನಂತರ ದಿನಾಂಕ 15 ನವೆಂಬರ್ 2025ರಂದು ಸಿದ್ದಾಪುರದಲ್ಲಿ ನಂತರ ಧಾರವಾಡ, ಹಾನಗಲ್ಲ, ಬೆಂಗಳೂರು ಇತ್ಯಾದಿ ಕಡೆಗಳಲ್ಲಿ ಜರುಗುವದು.
ಈ ನಾಟಕಕ್ಕಾಗಿ ಕಲಾವಿದರ ಆಯ್ಕೆಯನ್ನು ರಂಗಸಂಪದ ಬೆಳಗಾವಿಯ ತಂಡ ಸವಿತಾ ಬೈರಪ್ಪರವರ ಉಪಸ್ಥಿತಿಯಲ್ಲಿ ಈ ಕೆಳಗಿನ ದಿನ ಮತ್ತು ಸ್ಥಳಗಳಲ್ಲಿ ಮಾಡುತ್ತಿದೆ.
1) ಶನಿವಾರ ದಿನಾಂಕ 27 ಸೆಪ್ಟೆಂಬರ್ 2025ರಂದು ಸಂಜೆ ಗಂಟೆ 4-30ರಿಂದ 7-30 ಶ್ರೀ ಗುರುನಾಥ ಕುಲಕರ್ಣಿಯವರ ಸ್ವಗೃಹ, ಎರಡನೆಯ ಮಹಡಿ, ಕಲಾಶ್ರೀ ಅಪಾರ್ಟ್ಮೆಂಟ್, ಎಚ್.ಪಿ. ಆಫೀಸ ಎದುರು, ಆರ್.ಪಿ.ಡಿ. ಕ್ರಾಸ, ತಿಲಕವಾಡಿ, ಬೆಳಗಾವಿ.
2) ರವಿವಾರ ದಿನಾಂಕ 28 ಸೆಪ್ಟೆಂಬರ್ 2025ರಂದು ಬೆಳಿಗ್ಗೆ ಗಂಟೆ 10-30ರಿಂದ 1-00ರವರೆಗೆ ಕನ್ನಡ ಸಾಹಿತ್ಯ ಭವನ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ, ಬೆಳಗಾವಿ.
ಆಸಕ್ತ ಕಲಾವಿದರು ಈ ಎರಡು ದಿನಗಳಲ್ಲಿ ಯಾವದಾದರೂ ಒಂದು ದಿನ ಬಂದು ಸಂದರ್ಶನ ನೀಡಲು ಸೂಚನೆ. ರಂಗಸಂಪದ ಬೆಳಗಾವಿಯ ತಂಡದ ಕಲಾವಿದರಿಗೆ ಆದ್ಯತೆ ನೀಡಲಾಗುವದು. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿಯವರ ಮೊಬೈಲ್ ನಂಬರ 98450 25638ಗೆ ಸಂಪರ್ಕಿಸಿ.