Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖಕ | ‘ಕಾವ್ಯ ಸಂಸ್ಕೃತಿ ಯಾನ’ ಜನರಡೆಗೆ ಕಾವ್ಯ – ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಸಂದೇಶ
    Article

    ವಿಶೇಷ ಲೇಖಕ | ‘ಕಾವ್ಯ ಸಂಸ್ಕೃತಿ ಯಾನ’ ಜನರಡೆಗೆ ಕಾವ್ಯ – ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಸಂದೇಶ

    August 24, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸೃಷ್ಟಿಯ ಅನಾದಿ ಕಾಲದಿಂದಲೂ ಬದುಕು ಜೀವನ ಕಾವ್ಯ ಸಂಸ್ಕೃತಿಗಳು ನಿರಂತರ ಪ್ರಯಾಣ ಮಾಡುತ್ತಿರುತ್ತವೆ, ಸಂಚಾರ ಮಾಡುತ್ತಿರುತ್ತವೆ. ಅವು ಕಾಲ ಕಾಲಕ್ಕೆ ಬೇರೆ ಬೇರೆ ಹೆಸರು, ಭಾಷೆ, ಕ್ಷೇತ್ರಗಳನ್ನು ಪಡೆದುಕೊಳ್ಳುತ್ತವೆ. ಕಾಲಕ್ಕೆ ತಕ್ಕಂತೆ ತಜ್ಞರು, ವಿದ್ವಾಂಸರು ತಮ್ಮ ಸಮಕಾಲೀನ ಸಮಾಜದ ಸಾಮಾನ್ಯರಿಗೆ ಅವುಗಳ ತಿಳಿವಳಿಕೆ ನೀಡುತ್ತಾರೆ. ಕಾವ್ಯ ಸಂಸ್ಕೃತಿಯ ಯಾನದ ಅಂಥ ಪಯಣ ಈ ಸಲ ಒಂದು ವಿಶಿಷ್ಟ ಉದ್ದೇಶ, ಗುರಿಗಳನ್ನು ಹೊಂದಿಕೊಂಡು ನಾಡಿನ ತುಂಬ ಪಸರಿಸಲಿದೆ. ನಾಡು ನುಡಿಯ ಅಭಿಮಾನದ ಪರಿಮಳವನ್ನು ಬೀರುತ್ತ, ಹೊರನಾಡ ಕನ್ನಡಿಗರು, ಗಡಿನಾಡು ಮತ್ತು ಒಳಭಾಗದ ಎಲ್ಲಾ ಕಾವ್ಯಪ್ರೇಮಿಗಳ ಪರಿಚಯವನ್ನು ನವೀಕರಿಸಲಿದೆ.

    ಕಾವ್ಯಕ್ಕೆ ಹೊಸತು ಹಳತು ಎಂಬುದಿಲ್ಲ. ಅದು ನಿತ್ಯ ನವೀನವಾದುದು. ಓದುವ ಮನಸ್ಸು ಪ್ರತಿದಿನವೂ ಹೊಸದನ್ನು ಸ್ವೀಕರಿಸುತ್ತದೆ. ಆ ಮೂಲಕ ಮನುಕುಲದ ನೋವಿಗೆ ಮತ್ತೆ ಮತ್ತೆ ಮುಲಾಮು ಲೇಪಿಸಬೇಕಾಗುತ್ತದೆ. ಕಾವ್ಯದ ಓದು ಮತ್ತು ಪ್ರಚಾರ ಇಂದಿನ ದಿನಮಾನದಲ್ಲಿ ಸ್ವಲ್ಪ ಮಸುಕಾದಂತೆ ಕಂಡಿರಬಹುದಾದರೂ, ಸಂಗೀತ ಸಾಹಿತ್ಯ ರಂಗಭೂಮಿ ಮುಂತಾದವುಗಳ ಮೂಲಕ ವಿವಿಧ ಕಲಾಪ್ರೇಮಿಗಳ ಮನಸ್ಸನ್ನು ಮುದಗೊಳಿಸಿ ಹದಗೊಳಿಸಿ ಮತ್ತೆ ಸಂಸ್ಕೃತಿಯ ಹಾದಿಯ ಮೇಲೆ ನಡೆಯಲು ಪ್ರೇರೇಪಿಸುವುದು ಮಹಾಮನೆಯನವರ ನೇತೃತ್ವದಲ್ಲಿ ಹೆಜ್ಜೆ ಹಾಕುತ್ತಿರುವ ಸಂಗಾತಿಗಳ ಉದ್ದೇಶವಾಗಿದೆ.

    ಆಧುನಿಕ ವೈಜ್ಞಾನಿಕ ಸೌಲಭ್ಯಗಳು ಮನಸ್ಸನ್ನು ಕದಡುತ್ತವೆ, ಕಾಡುತ್ತವೆ; ಮುದಗೊಳಿಸುವುದಿಲ್ಲ, ಶಾಂತಿಯ, ನೆಮ್ಮದಿಯ ತಾಣದಿಂದ ದೂರ ತಳ್ಳುತ್ತವೆ. ಇಂಥ ಆಘಾತಕರ ವಾತಾವರಣದಲ್ಲಿಯೂ ಮೂಲತಃ ಸಂಸ್ಕೃತಿಯ ಆರಾಧಕರಾದ, ಕಾವ್ಯಪ್ರೇಮಿಗಳ ಪಡೆಯೊಂದಿಗೆ ಆಹ್ಲಾದಕರ ಕಾವ್ಯದ ಹುಡುಕಾಟ ಹಾಗೂ ತಡಕಾಟದ ಸುತ್ತ ಹೊಸ ಕವಿಗಳ, ಕಾವ್ಯಗಳ, ಕಾವ್ಯಸಂಗ್ರಹಗಳ, ಚರ್ಚೆಗಳ, ಹೊಸದೊಂದು ನಾಡಿನ ಕಾವ್ಯ ಸಂಸ್ಕೃತಿಯ ಕುಟುಂಬದ ಬಗೆಯೂ ಇಲ್ಲಿ ಸೇರಿದೆ.

    ಕಾವ್ಯ ವ್ಯಕ್ತಿಯೊಬ್ಬನ ಹೃದಯದ ಹೃತ್ತಂತ್ರಿಯೂ ಹೌದು, ಸಾಮಾಜಿಕ ಪ್ರತಿಕ್ರಿಯೆಯೂ ಹೌದು. ಈ ಕಾರಣಕ್ಕಾಗಿಯೇ ಅದು ನಾಟಕ, ರಂಗಭೂಮಿ, ಸಂಗೀತ, ನೃತ್ಯ ಮುಂತಾದ ಅಭಿವ್ಯಕ್ತಿಗಳೊಂದಿಗೆ ಏಕಕಾಲಕ್ಕೆ ಹಾರ್ದಿಕವೂ ಆಗುತ್ತದೆ, ಸಾಮಾಜಿಕವೂ ಆಗುತ್ತದೆ. ಒಬ್ಬ ಕವಿ ಏಕ ಕಾಲಕ್ಕೆ ಕವಿ, ನಾಟಕಕಾರ, ಸಾಮಾಜಿಕ ಹಾಗೂ ಸಮಗ್ರ ನಾಡಿನ ವಿಶ್ಲೇಷಕ ಚಿಂತಕನೂ ಆಗಿ ಬಹುಮುಖೀ ವ್ಯಕ್ತಿತ್ವವನ್ನು ಪಡೆದಿರುತ್ತಾನೆ. ಹೀಗಾಗಿ ರಾಮಾಯಣ, ಮಹಾಭಾರತ, ಗೀತೆ, ಕಾಳಿದಾಸ, ಶೇಕ್ಸಪಿಯರ್ ಮುಂತಾದ ಬಹುದೇಶಗಳ ಕವಿಗಳು ಏಕದೇಶೀಯರಾಗುತ್ತಾರೆ, ಏಕಭಾಷಿಕರೂ ಅನೇಕ ಭಾಷಿಕರೂ ಆಗುತ್ತಾರೆ. ಇದು ಕಾವ್ಯದ ಸಾಂಸ್ಕೃತಿಕ ಮನಸ್ಸುಳ್ಳ ಸಮಕಾಲೀನ ಚಿಂತಕರನ್ನು ಒಂದೆಡೆ ಸೇರುವಂತೆ ಮಾಡಿದೆ.

    ಕಾಲ, ಕಾವ್ಯ, ಜೀವನ, ಸಂಸ್ಕೃತಿ ಮುಂತಾದ ಅಮೂರ್ತ ಪದಗಳನ್ನು ಬದುಕಿಗೆ ಹತ್ತಿರವಾಗುವಂತೆ ಯತ್ನಿಸುತ್ತಿರುವ ಈ ಕಾವ್ಯಯಾನದ ಪ್ರಯತ್ನ ಮತ್ತು ಚಿಂತನೆ ಯಶಸ್ವಿಯಾಗಲಿ. ಕಾವ್ಯದ, ಸಂಸ್ಕೃತಿಯ ಈ ಮಹಾಯಾನ ಮತ್ತೆ ಮತ್ತೆ ನಮ್ಮ ಕವಿಗಳ, ಚಿಂತಕರ, ವಿಶ್ಲೇಷಕರ ಮನಸ್ಸನ್ನು ಚಿಗುರಿಸುವಂತಾಗಲಿ. ಕನ್ನಡ ಕಾವ್ಯ ಹಾಗೂ ಕರ್ನಾಟಕದ ಸಂಸ್ಕೃತಿ ಚಿಂತಕರು ಬಹುಶಃ ಸಮಗ್ರ ಭಾರತದಲ್ಲಿ ಇಂಥ ಆಲೋಚನೆ ಹೊಂದಿದ ಅಗ್ರಗಣ್ಯರಾಗಿದ್ದಾರೆ. ಭಾರತ ತನ್ಮೂಲಕ ಇತರ ದೇಶದ ಚಿಂತಕರನ್ನು ಸಹ ಈ ಚಟುವಟಿಕೆಗಳು ಪ್ರೇರೇಪಿಸಲಿ, ಸೂಜಿಗಲ್ಲಿನಂತೆ ಆಕರ್ಷಿಸಲಿ, ಎಂದು ಹಾರೈಸುತ್ತೇನೆ.

    ಸಿದ್ಧಲಿಂಗ ಪಟ್ಟಣಶೆಟ್ಟಿ
    ಹೂಮನೆ, ಶ್ರೀದೇವಿನಗರ, ಧಾರವಾಡ-4

    Share. Facebook Twitter Pinterest LinkedIn Tumblr WhatsApp Email
    Previous Articleಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದಲ್ಲಿ ‘ಸೌರಭ ಸಪ್ತಮಿ’ ಯಕ್ಷಗಾನ ಸಪ್ತಾಹ | ಆಗಸ್ಟ್ 25 ರಿಂದ 31
    Next Article ಚೆನ್ನೈಯ ಸಿದ್ದಾರ್ಥ ಪ್ರಕಾಶ್ ಇವರ ತಂಡದವರಿಂದ ಸಂಗೀತ ಕಛೇರಿ
    roovari

    Comments are closed.

    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.