Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ಕುಂಚ ಬ್ರಹ್ಮ ಮಾಡಿವಾಳಪ್ಪ ವೀರಪ್ಪ ಮಿಣಜಿಗಿ
    Artist

    ವಿಶೇಷ ಲೇಖನ – ಕುಂಚ ಬ್ರಹ್ಮ ಮಾಡಿವಾಳಪ್ಪ ವೀರಪ್ಪ ಮಿಣಜಿಗಿ

    January 30, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಭಾರತೀಯ ಕಲೆಗಳಲ್ಲಿ ಭಾರತೀಯ ಚಿತ್ರಕಲೆ ಸುಧೀರ್ಘವಾದ ಇತಿಹಾಸವನ್ನು ಹೊಂದಿದೆ. 64 ಕಲೆಗಳಲ್ಲಿ ಚಿತ್ರಕಲೆಯು ಒಂದು. ಚಿತ್ರಕಲೆ ವಿಶ್ವ ಭಾಷೆಯಾಗಿದೆ ಎನ್ನುತ್ತಾರೆ. ಯಾವುದೇ ಕಲೆ ದೇವರು ಒಲಿದು ಕೊಡುವ ವರ. ಅದನ್ನು ಸತತ ಅಭ್ಯಾಸ, ಸಾಧನೆ ಹಾಗೂ ಪ್ರಯತ್ನದಿಂದ ಕರಗತ ಮಾಡಿಕೊಳ್ಳುವುದು ಪ್ರತಿಯೊಬ್ಬ ಕಲಾಸಕ್ತನ ಕರ್ತವ್ಯ. ಹೀಗೆ ಸಾಧನೆ ಮಾಡಿದವರಲ್ಲಿ ಮಡಿವಾಳಪ್ಪ ವೀರಪ್ಪ ಮಿಣಜಿಗಿ ಒಬ್ಬರು.

    ಮಿಣಜಿಗಿಯವರು ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನೆಯಲ್ಲಿ ಪ್ರಖ್ಯಾತರು. 1901 ಜನವರಿ 30ರಂದು ಬಿಜಾಪುರದಲ್ಲಿ ಜನಿಸಿದ ಇವರ ತಂದೆ ವೀರಪ್ಪ ತಾಯಿ ಶರಣವ್ವ. ವೀರಪ್ಪ ಒಬ್ಬ ಶ್ರೀಮಂತ ವ್ಯಾಪಾರಿಯಾಗಿದ್ದರು. ಪ್ರಾರಂಭಿಕ ಶಿಕ್ಷಣವನ್ನು ಬಿಜಾಪುರದಲ್ಲಿ ಪಡೆದ ಬಳಿಕ ಮುಂದೆ ಓದಲಿಚ್ಚಿಸದೆ ಮುಂಬೈಯ ಜೆ. ಜೆ. ಕಲಾ ಮಂದಿರವನ್ನು ಸೇರಿದರು. ನಿರಂತರ ಅಭ್ಯಾಸದಿಂದ ‘ಆರ್ಟ್ ಮಾಸ್ಟರ್’ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಗಳಿಸಿದರು. ‘ಡಿಪ್ಲೋಮಾ ಇನ್ ಪೆಯಿಟಿಂಗ್ಸ್’ ಪದವಿಯಲ್ಲೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪ್ರಥಮ ವಿದ್ಯಾರ್ಥಿ ಎಂಬ ವಿಶೇಷ ಗೌರವಕ್ಕೆ ಪಾತ್ರರಾದರು. ಚಿತ್ರಕಲೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ನಿನ ‘ಕಾಲೇಜ್ ಆಫ್ ಆರ್ಟ್ಸ್’ ಸೇರಿದ ಮಿಣಜಿಗಿಯವರು ವಿಲಿಯಂ ರೂಥನ್ ಸ್ಟೈನ್ ಇವರ ಮಾರ್ಗದರ್ಶನದಲ್ಲಿ ನಿರಂತರ ಸಾಧನೆ ಮಾಡಿದರು. ನ್ಯಾಷನಲ್ ಗ್ಯಾಲರಿಯಲ್ಲಿದ್ದ ಎರಡು ಪ್ರಸಿದ್ಧ ಚಿತ್ರಗಳನ್ನು ಮಿಣಜಿಗಿಯವರು ಯಥಾಪ್ರತಿ ರಚನೆ ಮಾಡಿ ತನ್ನ ಕಲಾ ಕೌಶಲ್ಯವನ್ನು ತೋರಿದಾಗ, ಸ್ವತಂತ್ರವಾದ ಕೃತಿಗಳನ್ನು ರಚಿಸಲು ಗುರುಗಳು ಪ್ರೋತ್ಸಾಹದೊಂದಿಗೆ ಮಾರ್ಗದರ್ಶನ ನೀಡಿದರು. ಈ ಪ್ರೋತ್ಸಾಹದಿಂದಲೇ ಮುಂದೆ ಚಿತ್ರಕಲೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಶ್ರೇಷ್ಠ ಚಿತ್ರಗಳನ್ನು ತಯಾರು ಮಾಡುವಲ್ಲಿ ಮಿಣಜಿಗಿಯವರು ಯಶಸ್ಸನ್ನು ಪಡೆದರು.
    ಲಂಡನ್ನಿನಿಂದ ಕರ್ನಾಟಕಕ್ಕೆ ಬಂದ ಮಿಣಜಿಗಿಯವರು ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆರಂಭಿಸಿದ್ದ ಕರ್ನಾಟಕ ಆರ್ಟ್ಸ್ ಎಜುಕೇಶನ್ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಪ್ರಾಧ್ಯಾಪಕರಾಗಿ ದುಡಿದರು. ಇವರ ಶ್ರಮದ ಫಲವಾಗಿ ಮುಂದೆ ಇದೇ ಸಂಸ್ಥೆ ‘ಮಹಂತೇಶ ಕಲಾವಿದ್ಯಾಲಯ’ವಾಗಿ ರೂಪುಗೊಂಡಿತು. ಬೆಂಗಳೂರಿನಲ್ಲಿ ‘ಡ್ರಾಯಿಂಗ್ ಟೀಚರ್ಸ್ ಟ್ರೈನಿಂಗ್ ಇನ್ ಎಜುಕೇಶನ್ ಇನ್ಸ್ಟಿಟ್ಯೂಷನ್’ ಮತ್ತು ದಾವಣಗೆರೆಯಲ್ಲಿ ‘ಚಿತ್ರಕಲಾ ಹಾಗೂ ಕೈಗಾರಿಕಾ ಕಲಾ ಶಾಲೆ’ ತೆರೆಯುವಲ್ಲಿ ಮಿಣಜಿಗಿಯವರು ಪ್ರಧಾನ ಪಾತ್ರ ವಹಿಸಿದರು. ರಾಜ್ಯ ಲಲಿತ ಕಲಾ ಅಕಾಡೆಮಿ ಹಾಗೂ ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಉಪಾಧ್ಯಕ್ಷರಾಗಿ, ಕೇಂದ್ರ ಲಲಿತಕಲಾ ಆಕಾಡಮಿಯ ಸದಸ್ಯರಾಗಿ, ಮಿಣಜಿಗಿ ಅವರು ಚಿತ್ರಕಲಾ ಕ್ಷೇತ್ರಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಜಪಾನಿನಲ್ಲಿ ನಡೆದ ಕಲಾ ಸಮ್ಮೇಳನದಲ್ಲಿಯೂ ಭಾಗವಹಿಸಿದ ಹೆಗ್ಗಳಿಕೆ ಇವರದು. ನಿಸರ್ಗ ಸಂಯೋಜನೆ, ಭಾವಚಿತ್ರ, ಶರಣ ಸಾಹಿತ್ಯ, ವಿವಿಧ ಬಗೆಯ ಬಾದಾಮಿ ಭಿತ್ತಿ ಚಿತ್ರ ಹಾಗೂ ಜೋಗ್ ಫಾಲ್ಸ್ ಇವು ಚಿತ್ರಕಲಾ ಕ್ಷೇತ್ರದಲ್ಲಿ ಇವರ ಪ್ರತಿಭೆಗೆ ಸಾಕ್ಷಿಯಾಗಿ ಮೇರು ಸ್ಥಾನಕ್ಕೇರಿಸಿದವುಗಳು.
    ಮಿಣಜಿಗಿಯವರ ಕಲಾ ಪ್ರೌಢಿಮೆಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಅನೇಕ. ಮೈಸೂರು ದಸರಾ ಮಹೋತ್ಸವದಲ್ಲಿ ‘ಕುಂಚಬ್ರಹ್ಮ’, ‘ಮೈಸೂರು ಲಲಿತಕಲಾ ಅಕಾಡೆಮಿ ಪ್ರಶಸ್ತಿ’ , ‘ಕರ್ನಾಟಕ ಕಲಾ ಸಾರ್ವಭೌಮ’, ಕರ್ನಾಟಕ ವಿಶ್ವವಿದ್ಯಾಲಯದಿಂದ ‘ಗೌರವ ಡಾಕ್ಟರೇಟ್ ಪದವಿ’ ಇವೆಲ್ಲವೂ ಚಿತ್ರಕಲೆಯಲ್ಲಿ ಇವರ ಸೃಜನಶೀಲ ಸಾಧನೆಗೆ ಸಂದ ಗೌರವ.
    ಕಲೆ ಮತ್ತು ಸಂಗೀತದ ವಾತಾವರಣದಲ್ಲಿ ಬೆಳೆದ ಮಿಣಜಿಗಿಯವರು ಕಲಾ ಬದುಕಿನತ್ತ ಆಕರ್ಷಿತರಾಗಿ ಚಿತ್ರಕಲೆಯನ್ನೇ ಆಯ್ಕೆ ಮಾಡಿಕೊಂಡು, ಅನಂತ ಕೊಡುಗೆಯನ್ನು ನೀಡಿ, ಅದರಲ್ಲಿಯೇ ಪ್ರಸಿದ್ಧಿಯನ್ನು ಪಡೆದು, 1987ರಲ್ಲಿ ಚಿತ್ರಕಲಾ ಪ್ರಪಂಚದಿಂದ ದೂರವಾದರು. ಈ ಮಹಾನ್ ಚೇತನಕ್ಕೆ ಮನದಾಳದ ನಮನ.

    artist Birthday
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ಪ್ರಸಂಗ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ | ಜನವರಿ 31
    Next Article ಯಕ್ಷ ರಂಗದ ಯುವ ಮಹಿಳಾ ಕಲಾವಿದೆ ಕುಮಾರಿ ಸುಷ್ಮಿತಾ ಸಾಲಿಗ್ರಾಮ
    roovari

    Add Comment Cancel Reply


    Related Posts

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ವಿಶೇಷ ಲೇಖನ – ಸಂಗೀತ ವಿದ್ಯಾಸಾಗರ ಆರ್. ಆರ್. ಕೇಶವಮೂರ್ತಿ

    May 27, 2025

    ವಿಶೇಷ ಲೇಖನ | ಜನಪದ ಗಾನಸಿರಿ ಶ್ರೀ ಗುರುರಾಜ್ ಹೊಸಕೋಟೆ

    May 26, 2025

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.