Subscribe to Updates

    Get the latest creative news from FooBar about art, design and business.

    What's Hot

    ನಟನ ರಂಗಶಾಲೆಯಿಂದ ‘ರಂಗಭೂಮಿ ಡಿಪ್ಲೋಮಾ’ಗೆ ಆಹ್ವಾನ | ಮೇ 25

    May 20, 2025

    ಉಡುಪಿಯ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ‘ಕಲಾಯತನ’ ಸಾಹಿತ್ಯ ಯಕ್ಷ ಸಂಭ್ರಮ

    May 20, 2025

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಾಳಮದ್ದಳೆ ಕಾರ್ಯಕ್ರಮ

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ – ನೃತ್ಯ ಕ್ಷೇತ್ರದ ಸಾಟಿ ಇಲ್ಲದ ಪ್ರತಿಭೆ ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್
    Article

    ವಿಶೇಷ ಲೇಖನ – ನೃತ್ಯ ಕ್ಷೇತ್ರದ ಸಾಟಿ ಇಲ್ಲದ ಪ್ರತಿಭೆ ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್

    January 29, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಭಾರತೀಯ ಸಂಸ್ಕೃತಿಯಲ್ಲಿ ನೃತ್ಯ ಅತ್ಯಂತ ಪ್ರೌಢವಾದ, ಶ್ರೇಷ್ಠವಾದ ಮತ್ತು ಪ್ರಾಚೀನವಾದ ಕಲೆ. ದೇವರ ವರದಾನವಾದ ಈ ಕಲೆ ಹೃದಯದ ಭಾಷೆಯಾಗಿದೆ. ಶ್ರದ್ಧಾ ಭಕ್ತಿಯಿಂದ ಇದನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಕಲೆ ನಮಗೆ ಒಲಿಯುತ್ತದೆ. ಹಲವಾರು ಖ್ಯಾತಿವೆತ್ತ ಭರತನಾಟ್ಯ ಕಲಾವಿದರು ನಮ್ಮಲ್ಲಿದ್ದಾರೆ. ಅವರಲ್ಲಿ ಪ್ರತಿಭಾವಂತೆಯಾದ ಪ್ರತಿಭಾ ಪ್ರಹ್ಲಾದ್ ಒಬ್ಬರು. ಭರತನಾಟ್ಯ ಕಲಾವಿದೆ, ಶಿಕ್ಷಣ ತಜ್ಞೆ, ನೃತ್ಯ ಸಂಯೋಜಕಿ, ಕಲಾ ನಿರ್ವಾಹಕಿ ಮತ್ತು ಲೇಖಕಿಯಾಗಿ ಭರತ ನಾಟ್ಯಕಲೆಯನ್ನು ಮೇರು ಸ್ಥಾನಕ್ಕೆ ಕೊಂಡೊಯ್ದವರು ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್.

    ನೃತ್ಯದ ಮೇಲೆ ಅಪಾರ ಆಸಕ್ತಿ ಇದ್ದ ಪ್ರತಿಭಾ ತಮ್ಮ ನಾಲ್ಕರ ಹರೆಯದಲ್ಲಿಯೇ ಯಾವುದೇ ಸಾಂಪ್ರದಾಯಿಕ ತರಬೇತಿಯಿಲ್ಲದೆ ಪ್ರತಿಭೆಯನ್ನು ಹೊರಹೊಮ್ಮಿಸಿದವರು. ಆದರೆ ಹೆತ್ತವರು ಇವರ ಪ್ರತಿಭೆಯನ್ನು ಅರಿತುಕೊಂಡು ಅದಕ್ಕೆ ಬೇಕಾದ ಪ್ರೋತ್ಸಾಹವನ್ನು ನೀಡಿದರು. ಯು. ಎಸ್. ಕೃಷ್ಣ ರಾವ್, ಕಲಾ ನಿಧಿ ನಾರಾಯಣ ಮತ್ತು ವಿ. ಎಸ್. ಮುತ್ತುಸ್ವಾಮಿ ಪಿಳ್ಳೆ ಇವರುಗಳು ಭರತನಾಟ್ಯ ಮತ್ತು ವೆಂಪಟ್ಟಿ ಚಿನ್ನ ಸತ್ಯ ಅವರು ಕೂಚಿಪುಡಿಯ ನೃತ್ಯ ಶಿಕ್ಷಣಕ್ಕೆ ಬುನಾದಿಯನ್ನು ಹಾಕಿದ ಗುರುಗಳು.

    29 ಜನವರಿ 1962ರಂದು ಜನಿಸಿದ ಪ್ರತಿಭಾ 20ರ ಹರೆಯದ ಹೊತ್ತಿಗೆ ಪ್ರೌಢ ವೃತ್ತಿಪರ ನೃತ್ಯ ಕಲಾವಿದೆಯಾಗಿ ರೂಪುಗೊಂಡರು. ಭಾರತದಾದ್ಯಂತ ಪ್ರತಿಷ್ಠಿತ ವೇದಿಕೆಗಳು ಮತ್ತು ಸುಮಾರು 50ಕ್ಕೂ ಹೆಚ್ಚು ದೇಶಗಳಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಗಳ ವೇದಿಕೆಗಳು ಪ್ರತಿಭಾರ ವೃತ್ತಿ ಜೀವನದ ಪ್ರತಿಭೆಯ ಅನಾವರಣಕ್ಕೆ ಅವಕಾಶ ಮಾಡಿ ಕೊಟ್ಟವು.
    ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್ ಇವರ ನೇತೃತ್ವದ ದಕ್ಷಿಣ ಭಾರತ ನೃತ್ಯ ತಂಡ ಸೆಂಟ್ರಲ್ ಯುರೋಪಿಯನ್ ವಿಶ್ವವಿದ್ಯಾನಿಲಯದಲ್ಲಿ ಕಾರ್ಯಕ್ರಮವನ್ನು ನೀಡಿದೆ.

    ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರತಿಭಾ ಪ್ರಹ್ಲಾದ್, ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದರೊಂದಿಗೆ ದೂರದರ್ಶನದ ಧಾರವಾಹಿಗಳಲ್ಲಿ ನಿರ್ಮಾಣ, ನಿರ್ದೇಶನ ಮತ್ತು ನಟನೆಯನ್ನೂ ಮಾಡಿದ್ದಾರೆ. ನೃತ್ಯದಲ್ಲಿ ಪ್ರಾಯೋಗಿಕವಾಗಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳದೆ, ನೃತ್ಯ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತು ಕೃತಿ ರಚನೆಯನ್ನೂ ಮಾಡಿ ಪ್ರಕಟಿಸಿದ ಜ್ಞಾನಿ ಇವರು.
    ಈ ಕೃತಿಗಳು ಅಮೆಜಾನ್ ನಲ್ಲಿ ಹತ್ತು ವರ್ಷಗಳ ಕಾಲ ಬೇಡಿಕೆಯ ಸಾಲಿನಲ್ಲಿದ್ದು, ಉತ್ತಮ ಮಾರಾಟದಲ್ಲಿ ಎರಡನೇ ಸ್ಥಾನವನ್ನು ಪಡೆದಿತ್ತು. ಹಲವು ಬಾರಿ ಮರು ಮುದ್ರಣವನ್ನು ಕಂಡ ಈ ಕೃತಿಯ ಮೌಲ್ಯ ಏನು ಎಂಬುದನ್ನು ನಾವು ಅಂದಾಜಿಸಬಹುದು. ದೆಹಲಿ ಅಂತರಾಷ್ಟ್ರೀಯ ಕಲಾ ಉತ್ಸವದ ಸ್ಥಾಪಕ ನಿರ್ದೇಶಕಿಯಾಗಿದ್ದ ಇವರು “TEDX” ಎಂಬ ಸ್ಥಳೀಯ ಕೂಟದಲ್ಲಿ ಗೌರವಾನ್ವಿತ ಭಾಷಣಕಾರರಾಗಿದ್ದಾರೆ. “ಪ್ರಸಿದ್ಧ ಫೌಂಡೇಶನ್” ಮತ್ತು “ಫೋರಂ ಫಾರ್ ಆರ್ಟ್ ಬಿಯಾಂಡ್ ಬಾರ್ಡರ್ಸ್ “ಇವೆರಡನ್ನು ಸ್ಥಾಪಿಸಿದ ಕೀರ್ತಿ ಪ್ರತಿಭಾರದ್ದು.
    ಪ್ರಸಿದ್ಧ ನೃತ್ಯ ರೆಪರ್ಟರಿಗೆ ಕಲಾತ್ಮಕ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿಯಾಗಿದ್ದ ಇವರಿಗೆ 1997ರಲ್ಲಿ ‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ’, 2001 ರಲ್ಲಿ ನೃತ್ಯಕ್ಕಾಗಿ ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’, ಮತ್ತು ಕರ್ನಾಟಕದ ‘ರಾಜ್ಯ ಸರ್ಕಾರದ ಪ್ರಶಸ್ತಿ’, 2016ರಲ್ಲಿ ಈ ಸಜನಶೀಲ ಕಲಾವಿದೆಗೆ ಭಾರತ ಸರ್ಕಾರವು ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2001ರ ನವದೆಹಲಿಯ ಅಖಿಲ ಭಾರತ ರಾಷ್ಟ್ರೀಯ ಏಕತಾ ಸಮ್ಮೇಳನದಲ್ಲಿ ಇವರಿಗೆ ‘ಇಂದಿರಾಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ. ಇಷ್ಟೇ ಅಲ್ಲದೆ ಶಾಸ್ತ್ರೀಯ ನೃತ್ಯದಲ್ಲಿನ ಶ್ರೇಷ್ಠತೆಗಾಗಿ ‘ಮಹಿಳಾ ಶಿರೋಮಣಿ ಪ್ರಶಸ್ತಿ’, ‘ನಾಟ್ಯ ಭಾರತಿ’, ‘ಕರ್ನಾಟಕ ಕಲಾಶ್ರೀ’, ‘ಒರಿಸ್ಸಾ ಸಿನಿ ಕ್ರಿಟಿಕ್ಸ್ ಅವಾರ್ಡ್ ಫಾರ್ ಬೆಸ್ಟ್ ಡ್ಯಾನ್ಸರ್’, ‘ಸಿಂಗಾರ ಮಣಿ’, ‘ಬೆಂಗಳೂರಿನ ದಶಕದ ಮಹಿಳೆ’ ಇತ್ಯಾದಿ ಹತ್ತು ಹಲವಾರು ಬಿರುದುಗಳ ಕುಸುಮಗಳನ್ನು ಮತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿಕೊಂಡ ಖ್ಯಾತಿ ಇವರದು.
    ಭರತನಾಟ್ಯ ನೃತ್ಯ ಶ್ರೀಮಂತಿಕೆಯಿಂದ ನಮ್ಮ ಉದಾತ್ತ ಸಂಸ್ಕೃತಿಯ ಗರಿಮೆಯನ್ನು ಎಲ್ಲೆಡೆ ಪಸರಿಸಿದ ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್ ಇವರಿಗೆ ಅಭಿನಂದನೆಗಳು.

    article bharatanatyam Birthday dance dancer
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ‘ಗಾಂಧಿ ಸ್ಮೃತಿ’ ಕಾರ್ಯಕ್ರಮ
    Next Article ಬೈಂದೂರಿನ ಜೆ.ಎನ್.ಆರ್. ಹೊರಾಂಗಣ ವೇದಿಕೆಯಲ್ಲಿ ‘ಚಾರುವಸಂತ’ ದೇಸೀ ಕಾವ್ಯದ ರಂಗರೂಪ | ಫೆಬ್ರವರಿ 04
    roovari

    Add Comment Cancel Reply


    Related Posts

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಕ್ಕಳ ರಂಗ ಹಬ್ಬ’ | ಮೇ 20  

    May 19, 2025

    ಉಡುಪಿಯ ಬ್ರಾಹ್ಮಿ ಸಭಾಭವನದಲ್ಲಿ ಜಾನಪದ ನೃತ್ಯ ಸ್ಪರ್ಧೆ ‘ನೃತ್ಯ ಸಂಭ್ರಮ-2025’ | ಮೇ 18

    May 17, 2025

    ಕಯ್ಯಾರರ ಜನ್ಮದಿನ ಸಂಭ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ

    May 16, 2025

    ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಲ್ವತ್ತರ ನಲಿವು 11ನೇ ಸರಣಿ ಕಾರ್ಯಕ್ರಮ

    May 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.